ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ (ಚಂಪಾ)


 
ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ (ಚಂಪಾ)

ಸಾಹಿತ್ಯ ಲೋಕದಲ್ಲಿ 'ಚಂಪಾ' ಎಂದೇ ಹೆಸರಾದ ಕವಿ, 

ಕನ್ನಡನಾಡಿನ ಸಾಹಿತ್ಯಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಭಾಷಾ ಚಳವಳಿಗಳಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸಿದವರು ಚಂಪಾ. 1939ರ ಜೂನ್‌ 18ರಂದು ಜನಿಸಿದ ಚಂಪಾ ಅವರ ಹುಟ್ಟೂರು ಹಾವೇರಿ ಜಿಲ್ಲೆ ಸವಣೂರು ತಾಲ್ಲೂಕಿನ ಹತ್ತಿಮತ್ತೂರು.
ವಿದ್ಯಾರ್ಥಿಯಾಗಿದ್ದಾಗಲೇ ಅವರ ಪ್ರಥಮ ಕವನ ಸಂಕಲನ 'ಬಾನುಲಿ' (1960) ಪ್ರಕಟವಾಯಿತು.
'ಸಂಕ್ರಮಣ' (1964) ಹೆಸರಿನಲ್ಲಿ ದ್ವೈಮಾಸಿಕ ಸಾಹಿತ್ಯ ಪತ್ರಿಕೆ ಆರಂಭಿಸಿದರು. 2018ರ ವರೆಗೂ ಆ ಪತ್ರಿಕೆ ಪ್ರಕಟವಾಗಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ (1996-99) ಸಣ್ಣ ಪ್ರಕಾಶಕರನ್ನು ಉತ್ತೇಜಿಸಲು ಪ್ರತಿ ಶನಿವಾರ ‘ಪುಸ್ತಕ ಸಂತೆ’ ಏರ್ಪಡಿಸಿದ್ದರು. ಕನ್ನಡ ಸಾಹಿತ್ತ ಪರಿಷತ್‌ ಅಧ್ಯಕ್ಷರಾಗಿ (2004–08) ಆ ಪರಿಷತ್ತನ್ನೂ ನಾಡು, ನುಡಿಯಪರ ಸ್ಪಂದಿಸುವ ಪ್ರಬಲ ವೇದಿಕೆಯನ್ನಾಗಿ ರೂಪಿಸಿದ್ದು ಚಂಪಾಆ ಅವರ ಅಗ್ಗಳಿಕೆ.
 
2017 ರ ಮೈಸೂರಿನಲ್ಲಿ ನಡದ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲರು ಆಯ್ಕೆಯಾಗಿದ್ದರು.

 ಪ್ರಶಸ್ತಿಗಳು

👉 ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ -  (1960,74,76)
👉 ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ (1988)
👉 ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ (1989)
👉 ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ (1992)
👉 ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1995)
👉 ಕೆ.ವಿ. ಶಂಕರಗೌಡ ರಂಗಭೂಮಿ ಪ್ರಶಸ್ತಿ (1996)
👉 ಸಂದೇಶ ಮಾಧ್ಯಮ ಪ್ರಶಸ್ತಿ (1996)
👉 ಕರುನಾಡ ಭೂಷಣ ಪ್ರಶಸ್ತಿ (2006)
👉 ಆಳ್ವಾಸ್ ನುಡಿಸಿರಿ ಪ್ರಶಸ್ತಿ (2011)
👉 ಪಂಪ ಪ್ರಶಸ್ತಿ (2011)
👉 2018ನೇ ಸಾಲಿನಲ್ಲಿ ಬಸವಶ್ರೀ ಪ್ರಶಸ್ತಿ ಲಭಿಸಿದೆ.

Post a Comment

0 Comments