ಜೈನ ಧರ್ಮದ ಮುಖ್ಯಾಂಶಗಳು

 

ಜೈನ ಧರ್ಮದ ಮುಖ್ಯಾಂಶಗಳು



       ಜೈನ ಧರ್ಮದ ಮೊದಲ ತೀರ್ಥಂಕರ – ಆದಿನಾಥ (ವೃಷಭನಾಥ)

       ಜೈನ ಧರ್ಮದ 23ನೇ ತೀರ್ಥಂಕರ – ಪಾರ್ಶ್ವನಾಥ.

       ಜೈನ ಧರ್ಮದ 24ನೇ ತೀರ್ಥಂಕರ – ಮಹಾವೀರ.

       ʻಜೈನ ಕಲ್ಪಸೂತ್ರʼದ ರಚನೆಕಾರ – ಭದ್ರಬಾಹು.

       ಪಾರ್ಶ್ವನಾಥ ಪರಮ ಜ್ಞಾನ ಪಡೆದುಕೊಂಡ ವಯಸ್ಸು – 30ನೇ ವಯಸ್ಸು.

       ಪಾರ್ಶ್ವನಾಥರ ತಂದೆ – ಕಾಶಿಯ ರಾಜನಾದ ಅಶ್ವಸೇನ.

       ಪಾರ್ಶ್ವನಾಥರ ನಾಲ್ಕು ತತ್ವಗಳು – ಅಹಿಂಸೆ, ಸತ್ಯ, ಅಸ್ತೇಯ (ಕದಿಯದಿರುವುದು), ಅಪರಿಗ್ರಹ (ಸಂಪತ್ತಿನ ವ್ಯಾಮೋಹ ತ್ಯಜಿಸುವುದು).

       ವರ್ಧಮಾನ ಮಹಾವೀರನ ಜನನ – ಕ್ರಿ.ಪೂ 599.

       ಮಹಾವೀರನ ಮೊದಲ ಹೆಸರು – ವರ್ಧಮಾನ.

       ಮಹಾವೀರನ ಜನ್ಮಸ್ಥಳ – ಕುಂಡಲೀಪುರ / ಕುಂದಗ್ರಾಮ / ಕುಂಡಲವನ.

       ಮಹಾವೀರನ ತಂದೆ – ಸಿದ್ಧಾರ್ಥ.

       ಮಹಾವೀರನ ತಾಯಿ – ತ್ರಿಶಲಾದೇವಿ.

       ಮಹಾವೀರನ ಪತ್ನಿ – ಯಶೋಧಾ.

       ಮಹಾವೀರನ ಸಹೋದರ – ನಂದಿವರ್ಧನ.

       ಮಹಾವೀರನ ರಾಜವಂಶದ ಹೆಸರು – ಇಕ್ಷ್ವಾಕು.

       ಮಹಾವೀರ ಮಹಾ ಪರಿತ್ಯಾಗ ಮಾಡಿದ ವರ್ಷ – 30ನೇ ವಯಸ್ಸು.

       ಮಹಾವೀರನ ಪ್ರಮುಖ ತತ್ವಗಳು – ಅಹಿಂಸೆ, ಸತ್ಯ, ಆಸ್ತೇಯ, ಅಪರಿಗ್ರಹ, ಬ್ರಹ್ಮಚರ್ಯ.

       ಜೈನ ಧರ್ಮದ ತ್ರಿರತ್ನಗಳು – ಉತ್ತಮ ನಂಬಿಕೆ, ಉತ್ತಮ ಜ್ಞಾನ, ಉತ್ತಮ ನಡತೆ / ಕಾರ್ಯ.

       ಕ್ರಿ.ಪೂ 6ನೇ ಶತಮಾನದಲ್ಲಿ ಗಣರಾಜ್ಯ ರೂಪದ ಸರ್ಕಾರ ಹೊಂದಿದ್ದ ʼಲಿಚ್ಛವಿʼ - ಈಗಿನ ಬಿಹಾರ.

       ವೈದಿಕ ಧರ್ಮದ ವಿರುದ್ಧ ಪ್ರತಿಭಟನೆ ಮಾಡಿದ ಮೊದಲ ಧರ್ಮ – ಜೈನಧರ್ಮ.

       ಮಹಾವೀರನ ಮಗಳ ಹೆಸರು – ಅನೋಜ್ಯ (ಪ್ರಿಯದರ್ಶಿನಿ)

       ರಿಜುಕುಲ ಎಂಬ ಉಪನದಿಯ ದಂಡೆಯ ಜೃಂಭಕ ಎಂಬ ಗ್ರಾಮದಲ್ಲಿ 12 ವರ್ಷ ತಪಸ್ಸನ್ನು ಆಚರಿಸಿದವನು – ಮಹಾವೀರ.

       ಮಹಾವೀರನ ಪ್ರಥಮ ಶಿಷ್ಯ (ಗಣಧರ) – ಇಂದ್ರಭೂತಿ.

       ಜೈನ ಪವಿತ್ರ ಗ್ರಂಥಗಳು ಇರುವ ಭಾಷೆ – ಪ್ರಾಕೃತ.

       ಅಹಿಂಸೆಯೇ ಪರಮ ಧರ್ಮ ಎಂದು ಹೇಳಿದವರು – ಮಹಾವೀರ.

       ವಸ್ತ್ರ ಧರಿಸದ ಜೈನ ಸನ್ಯಾಸಿಗಳು – ದಿಗಂಬರರು.

       ಬಿಳಿಯ ವಸ್ತ್ರ ಧರಿಸುವ ಜೈನ ಸನ್ಯಾಸಿಗಳು – ಶ್ವೇತಾಂಬರರು.

       ಶ್ವೇತಾಂಬರರು – ಪಾರ್ಶ್ವನಾಥನ ಅನುಯಾಯಿಗಳು – ಬಿಳಿಯ ವಸ್ತ್ರಧಾರಿಗಳು.

       ದಿಗಂಬರರು – ಮಹಾವೀರನ ಅನುಯಾಯಿಗಳು – ನಿರ್ವಸ್ತ್ರಧಾರಿಗಳು.

       ಜೈನರ ಪವಿತ್ರ ಗ್ರಂಥ – ಆಗಮ ಸಿದ್ಧಾಂತ.

       ಮನುಷ್ಯ ಪ್ರಾಣಿ, ಸಸ್ಯ, ಭೂಮಿ, ಜಲಗಳಿಗೂ ಜೀವಿವಿದೆ ಎಂದು ವಾದಿಸಿದವರು – ಮಹಾವೀರ.

       ಕರ್ನಾಟಕದಲ್ಲಿರುವ ಪ್ರಾಚೀನ ಜೈನ ಕೇಂದ್ರಗಳು – ಕೊಪ್ಪಳ, ಶ್ರವಣಬೆಳಗೊಳ, ಬೆಳಗಾವಿ, ಕಂಬದಹಳ್ಳಿ, ಮೂಡಬಿದರೆ.

       ಶ್ರವಣಬೆಳಗೊಳದಲ್ಲಿ ನೆಲೆಸಿ ಜೈನ ಧರ್ಮದ ಪ್ರಚಾರ ಮಾಡಿದವರು – ಭದ್ರಬಾಹು.

       ಜೈನ ದೇವಾಲಯಗಳು – ಬಸದಿ.

       ಜೈನ ಧರ್ಮದ ಅನುಯಾಯಿಗಳು ಹೆಚ್ಚಾಗಿರುವ ರಾಜ್ಯಗಳು – ಗುಜರಾತ್‌, ರಾಜಸ್ಥಾನ.

       ರಾಜಸ್ಥಾನದ ಮೌಂಟ್‌ ಅಬು ಹಾಗೂ ಬಿಹಾರದ ಪಾವಾಪುರಿಯಲ್ಲಿರುವ ದೇವಾಲಯಗಳು – ಶ್ವೇತಾಂಬರರು.

       ಮಹಾವೀರನು ತನ್ನ 43ನೇ ವಯಸ್ಸಿನಲ್ಲಿ ಕೈವಲ್ಯ ಜ್ಞಾನ ಹೊಂದಿದ ಸ್ಥಳ – ಋಜುಪಾಲಿಕಾ ನದಿ ದಡ, ಜೃಂಬಿಕ ಗ್ರಾಮ.

       ಮಹಾವೀರನು ನಿರ್ವಾಣ ಹೊಂದಿದ ವರ್ಷ – ಕ್ರಿ.ಪೂ 527.

       ಮಹಾವೀರನು ತನ್ನ 72ನೇ ವಯಸ್ಸಿನಲ್ಲಿ ನಿರ್ವಾಣ ಹೊಂದಿದ ಸ್ಥಳ – ಪಾವಾಪುರಿ..

       ಮಗಧದ ಬಿಂಬಸಾರ, ಆವಂತಿಯ ಪ್ರದ್ಯೋತ, ಚಂಪಾದ ವೇದಿವರ್ಧನ ರಾಜರು ಪ್ರೋತ್ಸಾಹಿಸಿದ ಧರ್ಮ – ಜೈನ.

       ಜೈನ ಧರ್ಮದ 5 ಮಹಾ ತತ್ವಗಳು – ಅಹಿಂಸಾ, ಸತ್ಯ, ಆಸ್ತೇಯ, ಅಪರಿಗ್ರಹ, ಬ್ರಹ್ಮಚರ್ಯ.

       ಚಂದ್ರಗುಪ್ತ ಮೌರ್ಯನು ತನ್ನ ಕೊನೆಯ ದಿನಗಳನ್ನು ಕಳೆದ ಸ್ಥಳ – ಶ್ರವಣಬೆಳಗೊಳ.

       ಕನ್ನಡದ ಕವಿಗಳಾದ ಪಂಪ, ರನ್ನ ಹಾಗೂ ರತ್ನಾಕರವರ್ಣಿ ಇವರ ಧರ್ಮ – ಜೈನ.

       ಮಹಾವೀರನ ಅನುಯಾಯಿ ಸನ್ಯಾಸಿನಿಯರ ಮುಖ್ಯಸ್ಥರು – ಕಂಡನಳ.

       ಜೈನಸಂಘದ ವಿಭಜನೆಗೆ ಕಾರಣರು – ಜಮಾಲಿ (ಮಹಾವೀರನ ಹಿರಿಯ ಸೋದರಿಯ ಮಗ).

       ಮಹಾವೀರನ ಹನ್ನೊಂದು ಜನರನ್ನೊಳಗೊಂಡ ನಿಷ್ಠ ಅನುಯಾಯಿಗಳು – ಗಣಧರರು.

       ಚಂದ್ರಗುಪ್ತ ಮೌರ್ಯನ ಕಾಲದಲ್ಲಿದ್ದ ಜೈನ ಸಂಘದ ಮುಖ್ಯಸ್ಥ – ಸ್ಥೂಲಭದ್ರ.

       ದಕ್ಷಿಣ ಭಾರತದಲ್ಲಿ ಜೈನ ಧರ್ಮದ ಪ್ರಸಾರಕ್ಕೆ ಕಾರಣರಾದವರು – ಭದ್ರಬಾಹು.

       ಮೊದಲ ಜೈನ ಮಹಾಸಭೆ – ಕಾಲ – ಕ್ರಿ.ಪೂ 300, ಅಧ್ಯಕ್ಷತೆ – ಸ್ಥೂಲಭದ್ರ, ಸ್ಥಳ – ಪಾಟಲೀಪುತ್ರ.

       ಮೊದಲ ಜೈನ ಮಹಾಸಭೆ – ಉದ್ದೇಶ – ಜೈನ ಧರ್ಮದ ಪವಿತ್ರ ಗ್ರಂಥಗಳನ್ನು ಸಂಗ್ರಹಿಸಿ, ಜ್ಞಾನವನ್ನು ಪುನರುಜ್ಜೀವನಗೊಳಿಸುವುದು.

       ಎರಡನೇ ಜೈನ ಮಹಾಸಭೆ – ಕಾಲ – ಕ್ರಿ.ಶ. 512, ಸ್ಥಳ – ಗುಜರಾತ್‌ ನ ವಲ್ಲಭಿ.

       ಎರಡನೇ ಜೈನ ಮಹಾಸಭೆ – ಉದ್ದೇಶ – ಜೈನ ಧರ್ಮದ ಪವಿತ್ರ ಗ್ರಂಥಗಳನ್ನು ಸಂಗ್ರಹಿಸಿ ಕ್ರಮಬದ್ಧವಾಗಿ ಬರೆಯಲಾಯಿತು.

       ಜೈನ ಧರ್ಮದ ಪುರಾತನ ಸಿದ್ಧಾಂತಗಳ ಕುರಿತು ಕೃತಿ ರಚಿಸಿದವರು – ಅಕಳಂಕ.

       ಐಹೊಳೆ ಶಾಸನ ರಚಿಸಿದ ಎರಡನೇ ಪುಲಿಕೇಶಿಯ ದಂಡನಾಯಕ – ರವಿಕೀರ್ತಿ.

       ಶ್ರವಣಬೆಳಗೊಳದ ಬಾಹುಬಲಿಯ 58 ಅಡಿಯ ಬೃಹತ್‌ ಶಿಲಾವಿಗ್ರಹವನ್ನು ಕೆತ್ತಿಸಿದವರು – ಚಾವುಂಡರಾಯ.

 





Post a Comment

0 Comments