ಕರ್ನಾಟಕದ ಪ್ರಮುಖ ಮಣ್ಣುಗಳು

ಕರ್ನಾಟಕದ ಪ್ರಮುಖ ಮಣ್ಣುಗಳು

🔴 1.ಕೆಂಪು ಮಣ್ಣು
ಇದು ಗ್ರಾನೈಟ್,ನೀಸ್ ಶಿಲಾದ್ರವ್ಯಗಳಿಂದ ರೂಪಗೊಂಡಿದ್ದು,ಕಬ್ಬಿಣದ ಆಕ್ಸೈಡ್ ಇರುವುದರಿಂದ ಈ ಮಣ್ಣು ಕೆಂಪಾಗಿರುತ್ತದೆ.ಈ ಮಣ್ಣಿನಲ್ಲಿ ಹೆಚ್ಚು ಸುಣ್ಣ ಮತ್ತು ಉಪ್ಪಿನಾಂಶವಿದ್ದು,ಸಾವಯವ ಅಂಶ ಕಡಿಮೆ. ಹೆಚ್ಚು ಹಗುರ,ತೆಳು ಪದರವುಲ್ಳ ಈ ಮಣ್ಣು ಅಷ್ಟೊಂದು ಫಲವತ್ತಾದುದಲ್ಲ.

🔴 2.ಕಪ್ಪು ಮಣ್ಣು
ಇದು ಬಸಾಲ್ಟ ಶಿಲೆಯ ಶಿಥಲೀಕರಣದಿಂದ ಆಗಿದ್ದು,ಇದರಲ್ಲಿ ಹೆಚ್ಚು ಮೆಗ್ನೀಷಿಯಂ,ಅಲ್ಯೂಮಿನಿಯಂ ಮತ್ತು ಕಬ್ಬಿಣದ ಆಕ್ಸೈಡ್ ಗಳಿರುತ್ತವೆ. ಹೀಗಾಗಿ ಇದರ ಬಣ್ಣ ಕಪ್ಪು. ಇದನ್ನು ಎರೆಮಣ್ಣು ಅಥವಾ ಕಪ್ಪು ಹತ್ತಿ ಮಣ್ಣು ಎಂದೂ ಕರೆಯುತ್ತಾರೆ. ಇದಕ್ಕೆ ಹೆಚ್ಚು ದಿನ ತೇವಾಂಶವನ್ನು ಹಿಡಿದಿಕೊಳ್ಳುವ ಗುಣವಿದೆ.

🔴 3.ಜಂಬಿಟ್ಟಿಗೆ ಮಣ್ಣು
ಅಧಿಕ ಉಷ್ಣಾಂಶ ಮತ್ತು ಅಧಿಕ ಮಳೆ ಬೀಳುಬ ಭಾಗಗಳಲ್ಲಿ ಇದು ಕಂಡು ಬರುತ್ತದೆ. ನೀರಿನಲ್ಲಿ ಕರಗುವ ಸುಣ್ಣ ಮತ್ತು ಸಿಲಿಕೇಟ್ ಗಳು ಮಳೆನೀರಿನಲ್ಲಿ ಕರಗಿ ತಳದ ಮಣ್ಣಿನ ಸ್ತರಗಳಿಗೆ ಸಾಗಿಸಲ್ಪಡುತ್ತವೆ. ಕರಗದಂತಹ ಕಬ್ಬಿಣ ಮತ್ತು ಅಲ್ಯೂಮಿನಿಯಂಗಳು ಮೇಲ್ಪದರದಲ್ಲಿ ಉಳಿಯುತ್ತವೆ.

🔴 4.ಕರಾವಳಿಯ ಮೆಕ್ಕಲು ಮಣ್ಣು
ನದಿ,ಸಮುದ್ರದ ಅಲೆಗಳಿಂದ ಸಾಗಿಸಲ್ಪಟ್ಟ ಮಣ್ಣು ಸಮುದ್ರ ತೀರದಲ್ಲಿ ಸಂಗ್ರಹವಾಗಿ ನಿರ್ಮಾಣವಾಗಿದೆ. ಹೀಗಾಗಿ ರಾಜ್ಯದ ಕರಾವಳಿ ಜಿಲ್ಲೆಗಳಾದ ಉಡುಪಿ,ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈ ಮಣ್ಣು ಕಂಡು ಬರುತ್ತದೆ. ಇದರಲ್ಲಿ ಮರಳು ಮತ್ತು ಜೇಡಿ ಮಿಶ್ರಣವಾಗಿರುವುದರ ಜೊತೆಗೆ ಕೊಳೆತ ಜೈವಿಕಾಂಶಗಳು ಸಮೃದ್ಧವಾಗಿರುತ್ತವೆ.ಭತ್ತ,ಗೋಡಂಬಿ,ತೆಂಗು,ಅಡಿಕೆ,ಬಾಳೆ ಮುಂತಾದ ಬೆಳೆಗಳ ಸಾಗುವಳಿಗೆ ಇದು ಸೂಕ್

Post a Comment

0 Comments