ತದ್ದಿತಾಂತಗಳು

 ತದ್ದಿತಾಂತಗಳು
=====================
" ಕನ್ನಡ ಭಾಷಾ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಈ "ತದಿತಾಂತಗಳು" ಪ್ರಮುಖ ಪಾತ್ರವಹಿಸುತ್ತವೆ, ಇವು  "ಸಾಧಿತ ನಾಮ" ಗಳಲ್ಲಿ ಒಂದಾಗಿವೆ. "ಸಾಧಿತ ನಾಮ" ಎಂದರೆ, *ಎರಡು ಪದಗಳು ಕೂಡಿ ಹೊಸ ಪದವನ್ನು ಸಿದ್ಧಗೊಳಿಸುವುದಾಗಿದೆ*,  

" *ನಾಮಪ್ರಕೃತಿಗಳಿಗೆ ತದ್ಧಿತ ಪ್ರತ್ಯಯಗಳು ಹತ್ತಿ* ತದ್ದಿತಾಂತ ಪ್ರತ್ಯಗಳು ಆಗುತ್ತವೆ. ಇವುಗಳಲ್ಲಿ 3 ಪ್ರಕಾರಗಳು👇

1) *ತದ್ದಿತಾಂತ ನಾಮ*, 

2) *ತದ್ಧಿತಾಂತಾ ಭಾವನಾಮ.* 

3) *ತದ್ದಿತಾಂತ ಅವ್ಯಯ*

♦️ *ತದ್ದಿತಾಂತ ನಾಮ*,

👉" ನಾಮಪ್ರಕೃತಿ ಗಳಿಗೆ, *ಗಾರ,  ವಂತ, ಇಗ,  ಅಡಿಗ, ಆರ,ಕಾರ,  ಇಕ,* ಮುಂತಾದ ಪ್ರತ್ಯಗಳು ಹತ್ತಿ ತದ್ದಿತಾಂತ ನಾಮ ಗಳಾಗುತ್ತವೆ,

 🔹ಉದಾಹರಣೆ👇

1) "ಗಾರ"= *ಕೊಲೆಗಾರ, ಮೋಸಗಾರ, ಛಲಗಾರ, ಕಲೆಗಾರ*, etc 

2) "ವಂತ"= *ಹಣವಂತ, ಸಿರಿವಂತ, ಬುದ್ಧಿವಂತ, ರೂಪವಂತ,* etc 

3) "ಇಗ"= *ಕನ್ನಡಿಗ, ಕಬ್ಬಿಗ, ಗಾಣಿಗ, ಲೆಕ್ಕಿಗ,* etc

4) "ಅಡಿಗ"= *ಹೂವಾಡಿಗ, ಹಾವಾಡಿಗ,* etc 

5) "ಆರ್"= *ಕುಂಬಾರ, ಚಮ್ಮಾರ, ಪತ್ತಾರ, ಕಂಬಾರ.* etc 

6)"ಕಾರ್"= *ವಚನಕಾರ, ಓಲೆಕಾರ, ಚಿತ್ರಕಾರ,* etc

7) "ಇಕ"= *ಸೈನಿಕ, ಕ್ಷೌರಿಕ, ನಾವಿಕ,* etc

 🔹ತದ್ದಿತಾಂತ ನಾಮ ಗಳಲ್ಲಿ *ಸ್ತ್ರೀ ವಾಚಕಪದಗಳು*👇

1) "ಇತಿ"= *ಕನ್ನಡತಿ*
( ಕನ್ನಡ+ಇತಿ= ಕನ್ನಡತಿ  "ಲೋಪ ಸಂಧಿ")

 ಬ್ರಾಹ್ಮಣಿತಿ( ಬ್ರಹ್ಮನ+ಇತಿ= ಬ್ರಾಹ್ಮಣಿತಿ  "ಲೋಪ ಸಂಧಿ")

2)"ಇತ್ತಿ"= *ಹೂವಾಡಗಿತ್ತಿ*
( ಹೂವಾಡಿಗ+ ಇತ್ತಿ=ಹೂವಾಡಗಿತ್ತಿ. "ಲೋಪ ಸಂಧಿ")

 *ಹಾವಾಡಗಿತ್ತಿ*( ಹಾವಾಡಿಗ+ ಇತ್ತಿ=ಹಾವಾಡಗಿತ್ತಿ, "ಲೋಪ ಸಂಧಿ")

3)"ಗಿತ್ತಿ"= *ಅಗಸಗಿತ್ತಿ*( ಅಗಸ+ ಗಿತ್ತಿ= ಅಗಸಗಿತ್ತಿ. "ಲೋಪ ಸಂಧಿ")

4)"ತಿ"= *ಗೌಡತಿ*( ಗೌಡ+ತಿ= ಗೌಡತಿ)

 *ಗೊಲ್ಲತಿ*( ಗೊಲ್ಲ+ತಿ= ಗೊಲ್ಲತಿ. )

5)"ಇ"= *ಅರಸಿ*( ಅರಸ+ಇ= ಹರಸಿ) ( ಅಗಸ+ಇ= ಅಗಸಿ)

6)"ಎ"= *ಜಾಣೆ*( ಜಾಣ+ಎ=ಜಾಣೆ)
ನಲ್ಲ+ಎ= *ನಲ್ಲೆ*)(ಬುದ್ದಿವಂತ+ಎ= *ಬುದ್ಧಿವಂತೆ*)
=====================
🌟 *ತದ್ದಿತಾಂತ ಭಾವನಾಮ*👇

👉" ನಾಮಪ್ರಕೃತಿ ಗಳಿಗೆ ಭಾವಾರ್ಥದಲ್ಲಿ ತದ್ಧಿತ ಪ್ರತ್ಯಯಗಳು ಹತ್ತಿ ತದ್ದಿತಾಂತ ಭಾವನಾಮಗಳು ಆಗುತ್ತವೆ."
 *ತನ, ಇಕೆ, ಫು, ಮೆ, ಉ* ಪ್ರತ್ಯಗಳು ಹತ್ತುತ್ತವೆ.

🔹 ಉದಾಹರಣೆ👇

1) "ತನ"= *ಸುಳ್ಳತನ, ಕಳ್ಳತನ, ಮೋಸತನ, ಜಾಣತನ. ಸಿರಿತನ, ಬಡತನ* etc 

2)"ಇಕೆ"= *ಗೌಡಿಕೆ,ಹಣವಂತಿಕೆ, ಸಿರಿವಂತಿಕೆ, ಬುದ್ಧಿವಂತಿಕೆ,* etc

3)"ಫು"= *ಕಪ್ಪು, ಬಿಳಿಪು, ನುಣುಪು, ಇಂಪು*, etc

4)"ಮೆ"= *ಹಿರಿಮೆ, ಕಿರಿಮ, ಜಾಣ್ಮೆ, ನಲ್ಮೆ. ತಾಳ್ಮೆ, ದುಡಿಮೆ,* etc 

5)"ಉ"= *ಕುಂಟು. ಕಿವುಡು, ಕುರುಡು,* etc 
=====================

🌹 *ತದ್ದಿತಾಂತ ಅವ್ಯಯ*

👉" ನಾಮಪ್ರಕೃತಿಗಳಿಗೆ ಅವ್ಯಯದ ರೂಪದಲ್ಲಿ  ತದ್ದಿತಾಂತ ಪ್ರತ್ಯಯಗಳು ಹತ್ತಿ ತದ್ದಿತಾಂತ ಅವ್ಯಯಗಳು ಆಗುತ್ತವೆ, 
✍️ *ತನಕ, ವರಗೆ, ಆಗಿ, ಇಂತ, ಅಂತೆ, ಸಲುವಾಗಿ,ಓಸ್ಕೊರ, ಮಟ್ಟಿಗೆ,*

🔹 ಉದಾಹರಣೆ👇

1) "ತನಕ"= *ಮನೆಯತನಕ, ಶಾಲೆಯತನಕ, ಊರಿನ ತನಕ. ತೋಟದತನಕ.* etc 

2)"ವರಗೆ"= *ಮನೆಯವರೆಗೆ. ಶಾಲೆಯವರೆಗೆ, ತೋಟದ ವರೆಗೆ*. etc

3)'ಆಗಿ"= *ನಿನಗಾಗಿ. ನನಗಾಗಿ, ಅವರಿಗಾಗಿ, ಅವಳಿಗಾಗಿ,* etc 

4)"ಇಂತ"= *ನಿನಗಿಂತ, ಅವರಿಗಿಂತ, ದೇವರಿಗಿಂತ, ತಾಯಿಗಿಂತ, ತಂದೆಗಿಂತ*, etc 

5) "ಅಂತೆ"= *ರಾಮನಂತೆ, ಸೀತೆಯಂತೆ, ನಿನ್ನಂತೆ, ನನ್ನಂತೆ, ತಾಯಿಯಂತೆ.* etc

6) "ಸಲುವಾಗಿ"= *ಮನೆಯ ಸಲುವಾಗಿ, ಊರಿನ ಸಲುವಾಗಿ, ನಿನ್ನ ಸಲುವಾಗಿ, ನನ್ನ ಸಲುವಾಗಿ*, etc

7)"ಓಸ್ಕೊರ"= *ನಿನಗೋಸ್ಕರ, ನನಗೋಸ್ಕರ, ಶಾಲೆಗೋಸ್ಕರ*. etc 

8) "ಮಟ್ಟಿಗೆ"= *ನಿನ್ನ ಮಟ್ಟಿಗೆ, ನನ್ನ ಮಟ್ಟಿಗೆ, ಅದರ ಮಟ್ಟಿಗೆ, ದೇಶದ ಮಟ್ಟಿಗೆ,* etc

Post a Comment

0 Comments