ಕವನಗಳು

ಮರುಭೂಮಿಯಲ್ಲಿ  ತಣಿಸಿದೆ  ನೀ
ಒಡಲ  ಬಿಸಿಯಾ
ಬಿರುಬಿಸಿಲ  ಸುರಿದನಾತ  ಮುನಿದು. ......

ಮುಂಗಾರಿನಂತೆ  ಬಂದೆ   ನೀ
ಬರಗಾಲದ   ಬೀಡಿಗೆ 
ಭೋರ್ಗರೆವ  ವರ್ಷವಾ ಕಳಿಸಿದನಾತ ಧರೆಗೆ .......

ಮುಗಿಲಾಚೆ  ನಿಂತು  ನೀ
ಬಯಸಿದೆ  ನನ್ನೊಲವ 
ಕೈಗೆಟುಕದೆ ಕೈಚಾಚುತಿಹೆಂದು ಹರಸಿದನಾತ .......

ಬಣ್ಣಗಳ ಕಾರಂಜಿ  ತಂದೆ  ನೀ
ನನ್ನುಸಿರ ಬನಕೆ 
ಬರಸಿಡಿಲ ಸಿಡಿಸಿದನಾತ ನನ್ನ  ಮನಕೆ .....

ತಂಗಾಳಿ  ತಂಪು  ತಂದೆ ನೀ
ತಿಳಿಯಾದ  ಇಳೆಗೆ
ಬಿರುಗಾಳಿ  ಬರಿಸಿದನಾತ  ಸುರಿದು. .......

ಬಯಸುತಿದೆ  ನಿನ್ನೊಲವಾ
ಕಾದು ಕುಳಿತಿರುವೆ ದಾರಿಯನು 
ಸೊರಗಿ ಬಳಲೆಂದು ಶಪಿಸಿದನಾತ ........

                                               Gy3

Post a Comment

0 Comments