ಕವನಗಳು

ಕಾಮನಬಿಲ್ಲಲಿ  ಏಳೇಳು  ಬಣ್ಣಗಳು
ನನ್ನೆದೆಯ  ಪ್ರೀತಿಯು  ಏಳೇಳು ಜನುಮಗಳು
ಕಾಯುತ್ತಾ  ಕುಳಿತಿರುವೆ   ನೀ  ಬರುವ ಹಾದಿಯನೆ
ಬಾ  ಬೇಗ  ನೀನು ನನ್ನ  ಸೇರೋ  ನನ್ನರಸ  ......

ನಾ ಕಾಣೋ ಕನಸು ನೂರು
ಅದರಲ್ಲಿ  ನನಸು ಒಂಚೂರು
ಹೀಗಾಗಿ  ಎದೆಯಲ್ಲಿ  ಪ್ರೀತಿ ಶುರು
ಕಣ್ಣಂಚಿನ  ಕನಸಲ್ಲಿ  ಕಂಡೆ ನಾ ನಿನ್ನನಾ
ನೀ ನಡೆವ ಹಾದಿಯಲಿ  ಜೊತೆಯಾಗಿ  ನಾನು  ಬರುವೆ
ನೀ ಕಾಣೋ ಕನಸಿನಲಿ  ನನಸಾಗಿ
ನಾನೇ ಬರುವೆ 

ಕಾಯುತ್ತಾ  ಕುಳಿತಿರುವೆ   ನೀ  ಬರುವ ಹಾದಿಯನೆ
ಬಾ  ಬೇಗ  ನೀನು  ನನ್ನ     ನನ್ನರಸ  ......                           

Gy3

Post a Comment

0 Comments