ನದಿಗಳು

1) ಪೂರ್ವಾಭಿಮುಖವಾಗಿ ಹರಿಯುವ ನದಿಗಳನ್ನು ಹೆಸರಿಸಿ?
   1) ಘಟಪ್ರಭಾ
   2) ಮಲಪ್ರಭಾ
   3) ಭೀಮಾ
   4) ತುಂಗಭದ್ರಾ
   5) ಡೋಣಿ
               - ಮುಂತಾದವು.

2) ಮಹಾರಾಷ್ಟ್ರದ "ಭೀಮಾಶಂಕರ್" ಬಳಿಯಲ್ಲಿ ಉಗಮವಾಗುವ ನದಿ ಯಾವುದು?

ಭೀಮಾನದಿ

3) "ಉತ್ತರ ಪಿನಾಕಿನಿ ನದಿ"ಯ ಮತ್ತೊಂದು ಹೆಸರೇನು?

ಪೆನ್ನಾರ್

4) "ಛಾಯಾ ಭಗವತಿ" ಜಲಪಾತವನ್ನು ನಿರ್ಮಿಸುವ ನದಿ ಯಾವುದು?

ಡೋಣಿ

5) ಹಿರಣ್ಯಕೇಶಿ & ಮಾರ್ಕಂಡೇಯ ಇವು ಯಾವ ನದಿಯ ಉಪನದಿಗಳು?

ಘಟಪ್ರಭಾ

6) ರಾಣೆಬೆನ್ನೂರಿನ ಬಳಿ ಯಾವ ನದಿಯು ತುಂಗಭದ್ರಾ ನದಿಯನ್ನು ಸೇರುವುದು?

ಕುಮುದ್ವತಿ

7) "ನವಿಲುತಿರ್ಥ"ವೆಂದು ಯಾವ ನದಿಯನ್ನು ಕರೆಯುವರು?

ಮಲಪ್ರಭಾ

8) "ಗೋಕಾಕ್ ಜಲಪಾತ"ವನ್ನು ಉಂಟು ಮಾಡುವ ನದಿ ಯಾವುದು?

ಘಟಪ್ರಭಾ

9) ವೇದಾವತಿ & ಹಗರಿ ಯಾವ ನದಿಯ ಉಪನದಿಗಳು?

ತುಂಗಭದ್ರಾ

10) ಘಟಪ್ರಭಾ ನದಿಯ ಉಗಮ ಸ್ಥಳ ಯಾವುದು?

ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಪಶ್ಚಿಮಘಟ್ಟ

11) ಬಾದಾಮಿ ಯಾವ ನದಿಯ ಎಡದಂಡೆಗೆ ಸಮೀಪದಲ್ಲಿದೆ?

ಮಲಪ್ರಭಾ

12) ಗುಲ್ಬರ್ಗಾ ಜಿಲ್ಲೆಯ ಜಪಾಲಪುರದ ಬಳಿ ಡೋಣಿ ಯಾವ ನದಿಯನ್ನು ಸೇರುವುದು?

ಕೃಷ್ಣಾ

13) ಮಲಪ್ರಭಾ ನದಿಯ ಉಗಮ ಸ್ಥಳ ಯಾವುದು?

ಕನಕುಂಬಿ

14) ಕನಕುಂಬಿ ಬೆಳಗಾವಿ ಜಿಲ್ಲೆಯ ಯಾವ ತಾಲ್ಲೂಕಿನಲ್ಲಿದೆ?

ಖಾನಾಪುರ

15) ಯಾವ ನದಿಗೆ "ಪಂಪಸಾಗರ" ಜಲಾಶಯ ನಿರ್ಮಿಸಲಾಗಿದೆ?

ತುಂಗಭದ್ರಾ

16) ಮಹಾರಾಷ್ಟ್ರದ ದತ್ತಪಟ್ಟಣದ ಬಳಿ ಹುಟ್ಟುವ ನದಿ ಯಾವುದು?
 
ಡೋಣಿ

17) ಬೆಣ್ಣೆ ಹಳ್ಳ & ಹಿರೇ ಹಳ್ಳ ಯಾವ ನದಿಯ ಉಪನದಿಗಳು?

ಮಲಪ್ರಭಾ

18) ತುಂಗಾಭದ್ರಾ ನದಿಯು ಆಂಧ್ರಪ್ರದೇಶದ ಯಾವ ಸ್ಥಳದಲ್ಲಿ ಕೃಷ್ಣಾ ನದಿಯನ್ನು ಸೇರುತ್ತದೆ?

ಕರ್ನೂಲ್ ಬಳಿ ಆಲಂಪುರದಲ್ಲಿ

19) ಇತಿಹಾಸ ಪ್ರಸಿದ್ಧ ಪಟ್ಟದಕಲ್ಲು & ಐಹೋಳೆ ಯಾವ ನದಿಯ ಬಲದಂಡೆಗೆ ಇವೆ?

ಮಲಪ್ರಭಾ

20) ಶಿವಮೊಗ್ಗದ ಮೂಲಕ ಹರಿದು ಬರುವ "ವರದಾನದಿಯು" ಬಿಲ್ವಿಗಿಯ ಬಳಿ ಯಾವ ನದಿಯನ್ನು ಸೇರುವುದು?

ತುಂಗಭದ್ರಾ

21) ವರದಾ & ಕುಮದ್ವತಿ ಯಾವ ನದಿಯ ಉಪನದಿಗಳು?

  ತುಂಗಭದ್ರಾ

22) ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳನ್ನು ಹೆಸರಿಸಿ?
  1) ಕಾಳಿ
  2) ಶರಾವತಿ
  3) ನೇತ್ರಾವತಿ
  4) ಬೇಡ್ತಿ
  5) ಅಘನಾಶಿನಿ
  6) ವಾರಾಹಿ
  7) ಮಹಾದಾಯಿ
               --- ಮುಂತಾದವು.

23) "ಬಾರಪೊಳೆ ನದಿ"ಯು ಯಾವ ಎರಡು ರಾಜ್ಯಗಳಲ್ಲಿ ಹರಿಯುತ್ತದೆ?

ಕರ್ನಾಟಕ & ಕೇರಳ

24) "ಮಾಗೋಡು ಜಲಪಾತ"ವನ್ನು ಉಂಟುಮಾಡುವ ನದಿ ಯಾವುದು?
 
ಬೇಡ್ತಿ

25) ಬೇಡ್ತಿ ನದಿಯ ಮತ್ತೊಂದು ಹೆಸರೇನು?

ಗಂಗಾವಳಿ

26) ಕಾಳಿ ನದಿಯ ಉಗಮ ಸ್ಥಳ ಯಾವುದು?

ಉತ್ತರಕನ್ನಡ ಜಿಲ್ಲೆಯ ಸೂಪಾ ತಾಲ್ಲೂಕಿನ ಡಿಗ್ಗಿಘಾಟಿನಲ್ಲಿ.

27) "ಭಂಡಾಜೆ ಜಲಪಾತ"ವನ್ನು ಉಂಟುಮಾಡುವ ನದಿ ಯಾವುದು?

ನೇತ್ರಾವತಿ.

28) ಹರಿದ್ರಾತಿ & ಎಣ್ಣೆ ಹೊಳಿ ಇವು ಯಾವ ನದಿಯ ಪ್ರಮುಖ ಉಪನದಿಗಳು?

ಶರಾವತಿ.

29) ಶರಾವತಿ ನದಿಯ ಉಗಮಸ್ಥಳ ಯಾವುದು?

ಶಿವಮೊಗ್ಗ ಜಿಲ್ಲೆಯ ತಿರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥ.

30) ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಲ್ಲಿ ಉದ್ದವಾದ ನದಿ ಯಾವುದು?

ಕಾಳಿನದಿ

31) "ಉಂಚಳ್ಳಿ ಜಲಪಾತ"ವನ್ನು ನಿರ್ಮಿಸುವ ನದಿ ಯಾವುದು?

ಅಘನಾಶಿನಿ.

32) ಭೂಗರ್ಭದಲ್ಲಿ ವಿದ್ಯುತ್ ಉತ್ಪಾದನೆಯನ್ನು ಆರಂಭಿಸಿರುವ ಏಕೈಕ ನದಿ ಯಾವುದು?

ವರಾಹಿ ನದಿ

33) ನೇತ್ರಾವತಿ ನದಿಯ ಉಗಮಸ್ಥಳ ಯಾವುದು?

ಚಿಕ್ಕಮಗಳೂರು ಜಿಲ್ಲೆಯ ಬಲ್ಲಾಳರಾಯನದುರ್ಗದ ಬಳಿ.

34) "ಲಾಲಗುಳಿ ಜಲಪಾತ''ವನ್ನು ಉಂಟು ಮಾಡುವ ನದಿ ಯಾವುದು?

ಕಾಳಿ ನದಿ.

35) ಕಳಸ & ಬಂಡೂರಿ ಯಾವ ನದಿಯ ಉಪನದಿಗಳು?

ಮಹದಾಯಿ.

36) ಶಿವಗಂಗೆ & ಇಳಿಮನೆ ಜಲಪಾತಗಳನ್ನು ಉಂಟುಮಾಡುವ ನದಿ ಯಾವುದು?

ಅಘನಾಶಿನಿ.

37) ಗುರುಪುರ & ಕುಮಾರಧಾರ ಯಾವ ನದಿಯ ಉಪನದಿಗಳು?

ನೇತ್ರಾವತಿ.

38) ಮಹದಾಯಿ ನದಿಯು ಗೋವಾದಲ್ಲಿ ಯಾವ ಹೆಸರಿನಿಂದ ಹರಿಯುವುದು?

ಮಾಂಡೋವಿ

39) ಜಗತ್ಪ್ರಸಿದ್ಧ "ಜೋಗ್ ಜಲಪಾತ"ವನ್ನು ಸೃಷ್ಟಿಸಿದ ನದಿ ಯಾವುದು?

ಶರಾವತಿ

40) "ಕಪ್ಪುಕಾಳಿ" ಎಂದು ಯಾವ ನದಿಯನ್ನು ಕರೆಯುತ್ತಾರೆ?

ಕಾಳಿ

41) "ಪಣಜಿ" ಯಾವ ನದಿಯ ತೀರದಲ್ಲಿದೆ?

ಮಹದಾಯಿ

42) ತಟ್ಟಿಹಳ್ಳ & ಪಂಡ್ರಿ ಯಾವ ನದಿಯ ಉಪನದಿಗಳು?

ಕಾಳಿನದಿ

43) ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ದೇವಾಂಗ ಎಂಬಲ್ಲಿ ಉಗಮವಾಗುವ ನದಿ ಯಾವುದು?

ಮಹದಾಯಿ

44) ಚಾರ್ಮುಡಿ, ಶಿಶಿಲ & ಪಾಲ್ಗುಣಿ ಯಾವ ನದಿಯ ಉಪನದಿಗಳು?

ನೇತ್ರಾವತಿ

45) ಕನೇರಿ, ವಾಕಿ &  ಇವು ಯಾವ ನದಿಯ ಉಪನದಿಗಳು?

ಕಾಳಿನದಿ

Post a Comment

0 Comments