ರಜೆಯ ಕುರಿತು ಕೆಲವು ಪ್ರಶ್ನೆಗಳು& ಉತ್ತರ

1. *ಒಂದು ವರ್ಷದಲ್ಲಿನ ಒಟ್ಟು CL ಗಳ ಸಂಖ್ಯೆ ಎಷ್ಟು?*
ಉ:-15.

2. *CLಗಳನ್ನು  ಜಮಾ ಮಾಡುವುದು* *ಕ್ಯಾಲೆಂಡರ್ ವರ್ಷಕ್ಕೊ ಅಥವಾ ಶೈಕ್ಷಣಿಕ ವರ್ಷಕ್ಕೊ?*
ಉ:-ಕ್ಯಾಲೆಂಡರ್ ವರ್ಷಕ್ಕೆ.

3. *ಉಳಿದ CL ಗಳನ್ನು ಮುಂದಿನ* *ವರ್ಷಕ್ಕೆ ಕೊಂಡೊಯ್ಯಬಹುದೆ?*
ಉ:-ಇಲ್ಲ.ಉಳಿದ CL ಗಳು ವ್ಯರ್ಥ ವೇ ಸರಿ.

4. *CL ಗಳು ನಮ್ಮ ಹಕ್ಕುಗಳೇ?*
ಉ:-ಯಾವ ರೀತಿಯ ರಜೆಗಳೂ ನಮ್ಮ ಹಕ್ಕುಗಳಲ್ಲ.

5. *ಶಾಲೆಗಳಲ್ಲಿ CLಮಂಜೂರು ಮಾಡುವವರು ಯಾರು?*
ಉ:-ಮುಖ್ಯ ಶಿಕ್ಷಕರು.

6. *ನಿರಂತರವಾಗಿ ಎಷ್ಟು  CL   ಗಳನ್ನು ಬಳಸಬಹುದು.?*
ಉ:ನಿರಂತರವಾಗಿ 7 CL ಗಳನ್ನು ಬಳಸಬಹುದು.
* ಸಾರ್ವತ್ರಿಕ ರಜೆಗಳು ಸೇರಿದ್ದರೆ 10 CL ಗಳನ್ನು ಬಳಸಬಹುದು.

7. *ಮುಖ್ಯಶಿಕ್ಷಕರು ನಿರಂತರ ಎಷ್ಟು CL ಗಳನ್ನು ಮಂಜೂರು ಮಾಡಬಹುದು.?*
ಉ:-Kcsr ನಂತೆ ನಿರಂತರ. 7 CL ಗಳನ್ನೂ ಮುಖ್ಯಶಿಕ್ಷಕರೇ ಮಂಜೂರು ಮಾಡಬಹುದು.ಆದರೆ ಇಲಾಖೆಯ ಸುತ್ತೋಲೆಯಂತೆ ನಿರಂತರ 5 CL ಗಳನ್ನು ಮುಖ್ಯಶಿಕ್ಷಕರು ಮಂಜೂರು ಮಾಡಬಹುದು.ಮತ್ತೆ ಪಡೆಯಲು ಮೇಲಾಧಿಕಾರಿಗಳ ಅನುಮತಿ ಅಗತ್ಯ.

8. *ಶನಿವಾರ CL ಪಡೆದಿದ್ದರೆ ಭಾನುವಾರವೂ CL ಆಗುತ್ತದ್ದೆಯೇ?*
ಉ:- ಇಲ್ಲ.
*ಯಾವುದೇ ಸಾರ್ವತ್ರಿಕ ರಜೆಗಳಂದು CL ನಮೂದಿಸುವಂತ್ತಿಲ್ಲ.

9. *ನಿರ್ಬಂಧಿತ ರಜೆ ಯೊಂದಿಗೆ CL ಜೋಡಿಸಬಹುದೇ?*
ಉ:-ಜೋಡಿಸಿ ನಿರಂತರವಾಗಿ ಹಾಕಬಹುದು.

10. *ಡಿಸೆಂಬರ್ ತಿಂಗಳಲ್ಲಿ ಗರಿಷ್ಠ ಎಷ್ಟು CL ಗಳನ್ನು ಬಳಸಬಹುದು?*
ಉ:-ಡಿಸೆಂಬರ್ ಅಥವಾ ಯಾವುದೇ ತಿಂಗಳಲ್ಲಿ ಇಂತಿಷ್ಟೆ CL ಬಳಸಬೇಕೆಂಬ ನಿಯಮವಿರುವುದಿಲ್ಲ.
* ಆದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಆದೇಶದಂತೆ ಡಿಸೆಂಬರ್ ತಿಂಗಳಲ್ಲಿ 2 CL ಗಳನ್ನು ಮಾತ್ರ ಬಳಸಲು ಆದೇಶವಾಗಿರುತ್ತದೆ.
ಗಮನಿಸಿ ಈ ಆದೇಶ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರೌಢಶಾಲಾ ಶಿಕ್ಷಕರಿಗೆ ಮಾತ್ರ ಅನ್ವಯವಾಗುತ್ತದೆ.ಇದು ಎಲ್ಲಾ ಜಿಲ್ಲೆಯವರಿಗಲ್ಲ.ಅದರಲ್ಲೂ ಪ್ರಾಥಮಿಕ ಶಾಲೆಗಳಿಗೆ ಎಲ್ಲೂ ಆದೇಶವಾಗಿರುವುದಿಲ್ಲ,ಅನಗತ್ಯ ಗೊಂದಲ ಊಹಾಪೋಹ ಬೇಡ.

11. *ಹೊಸದಾಗಿ ಸೇವೆಗೆ ಸೇರಿದ ಶಿಕ್ಷಕರಿಗೆ CL ಹೇಗೆ ನೀಡುವುದು?*
ಉ:- ಹೊಸ ಶಿಕ್ಷಕರಿಗೆ ಮುಂಗಡವಾಗಿ CL ಗಳು ದೊರಕುವುದಿಲ್ಲ.ಅವರು ಒಂದು ವರ್ಷ ಸೇವೆ ಪೂರ್ಣಗೊಳಿಸಿದ ನಂತರ ಮುಂಗಡ 15 CL ಗಳು ದೊರಕುತ್ತವೆ.ಅಲ್ಲಿಯವರೆಗೆ ಅವರು ಪ್ರತೀ ಒಂದು ತಿಂಗಳ ಪೂರ್ಣ ಸೇವೆಯ ನಂತರ 1 CL ಪಡೆಯುತ್ತಾ ಹೋಗುತ್ತಾರೆ.

12. *ಎಲ್ಲಾ 15 CL ಗಳು ಮುಗಿದ ನಂತರ ಮುಂಗಡವಾಗಿ CL ಪಡೆಯಬಹುದೆ?*
ಉ:- ಇಲ್ಲ.

13. *CL ಪಡೆಯಲು ಮುಖ್ಯಶಿಕ್ಷಕರ  ಪೂರ್ವಾನುಮತಿ ಅಗತ್ಯವೆ?*
ಉ:- ಹೌದು.
*ಆದರೆ ಅನಾರೋಗ್ಯ, ಮತ್ತಿತರ ಬೇರೆ ಸಾಧ್ಯತೆಗಳೇ ಇಲ್ಲದ ಸಂದರ್ಭದಲ್ಲಿ ಮಾತ್ರ ವಿನಾಯಿತಿ ಇದೆ.ಆದರೆ ಪೂರಕ ದಾಖಲೆ ಒದಗಿಸಿ ಸಮಜಾಯಿಸಿ ನೀಡಬೇಕು.

Post a Comment

0 Comments