ಸಂವಿಧಾನ ತಿದ್ದುಪಡಿ

 ಸಂವಿಧಾನ ತಿದ್ದುಪಡಿ ವಿಧಾನವನ್ನು ದಕ್ಷಿಣ ಆಫ್ರಿಕಾ ಸಂವಿಧಾನದಿಂದ ಎರವಲು ಪಡೆಯಲಾಗಿದೆ. 



✅ಭಾರತ ಸಂವಿಧಾನದ 20ನೇ ಭಾಗದಲ್ಲಿರುವ 368ನೇ ವಿಧಿಯು ಸಂವಿಧಾನದ ತಿದ್ದುಪಡಿಗೆ ಸಂಬಂಧಿಸಿದೆ. 


🔰 ಸಂವಿಧಾನದ 105ನೇ ಸಂವಿಧಾನ ತಿದ್ದುಪಡಿ ಕಾಯಿದೆ - 

ಹಿಂದುಳಿದ ಜಾತಿಗಳನ್ನು ಒಬಿಸಿ ಪಟ್ಟಿ ರಚಿಸುವ ಹಕ್ಕನ್ನು ಮರಳಿ ರಾಜ್ಯಗಳಿಗೆ ನೀಡುವ ಮಸೂದೆ. 


🔰 ಸಂವಿಧಾನದ 104ನೇ ಸಂವಿಧಾನ ತಿದ್ದುಪಡಿ ಕಾಯಿದೆ - 

330 ಮತ್ತು 332ನೇ ವಿಧಿಗಳ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ನೀಡಲಾಗಿದ್ಧ ಸ್ಥಾನ ಮೀಸಲಾತಿಯನ್ನು 2020 ರಿಂದ 2030ಕ್ಕೆ ವಿಸ್ತರಿಸಲಾಗಿದೆ. 


🔰ಸಂವಿಧಾನದ 103ನೇ ಸಂವಿಧಾನ ತಿದ್ದುಪಡಿ ಕಾಯಿದೆ - 

ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಸಾರ್ವಜನಿಕ (ಸರ್ಕಾರಿ) ಉದ್ಯೋಗಗಲ್ಲಿ ಶೇ.10 ರಷ್ಟು ಮಿಸಲಾತಿ ಸ್ಥಾನ ನೀಡುವುದು. 


🔰ಸಂವಿಧಾನದ 102ನೇ ಸಂವಿಧಾನ ತಿದ್ದುಪಡಿ ಕಾಯಿದೆ - 


ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ಸಂವಿಧಾನಾತ್ಮಕ ಸ್ಥಾನಮಾನ ನೀಡುವುದು. 


🔰 ಸಂವಿಧಾನದ 101ನೇ ಸಂವಿಧಾನ ತಿದ್ದುಪಡಿ ಕಾಯಿದೆ - 

ಸರಕು ಮತ್ತು ಸೇವೆಗಳ ತೆರಿಗೆ (GST) ಮಸೂದೆ. 


🔰 ಸಂವಿಧಾನದ 99ನೇ ಸಂವಿಧಾನ ತಿದ್ದುಪಡಿ ಕಾಯಿದೆ - 


ಕೊಲಿಜಿಯಂ ಪದ್ಧತಿಯನ್ನು ರದ್ದುಪಡಿಸಿ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗದ ರಚನೆಗೆ ಅವಕಾಶ ಕಲ್ಪಿಸಿತು. 


🔰 ಸಂವಿಧಾನದ 98ನೇ ಸಂವಿಧಾನ ತಿದ್ದುಪಡಿ ಕಾಯಿದೆ - 


ಸಂವಿಧಾನಕ್ಕೆ 371(J) ಅಡಿಯಲ್ಲಿ ಹೈದರಾಬಾದ್ - ಕರ್ನಾಟಕದ ಏಳು ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ನೀಡುತ್ತದೆ. 


🔰 ಸಂವಿಧಾನದ 93ನೇ ಸಂವಿಧಾನ ತಿದ್ದುಪಡಿ ಕಾಯಿದೆ - 


ಖಾಸಗಿ ಅನುದಾನಿತ ರಹಿತ ವಿದ್ಯಾ ಸಂಸ್ಥೆಗಳಲ್ಲಿ (ಅಲ್ಪಸಂಖ್ಯಾತರ ಸಂಸ್ಥೆಗಳನ್ನು ಹೊರತುಪಡಿಸಿ) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಮಕ್ಕಳಿಗೆ ಮೀಸಲು ನಿಯಮವನ್ನು ಜಾರಿಗೊಳಿಸಲು ಅವಕಾಶ ಮಾಡಿದೆ. 


🔰 ಸಂವಿಧಾನದ 92ನೇ ಸಂವಿಧಾನ ತಿದ್ದುಪಡಿ ಕಾಯಿದೆ - 


ಬೋಡೋ, ದೋಗ್ರಿ, ಮೈಥಿಲಿ ಮತ್ತು ಸಂತಾಲಿ ಎಂಬ ನಾಲ್ಕು ಭಾಷೆಗಳನ್ನು ಸಂವಿಧಾನದ 08ನೇ ಅನುಸೂಚಿಗೆ ಸೇರಿಸಲಾಯಿತು. 


🔰 ಸಂವಿಧಾನದ 91ನೇ ಸಂವಿಧಾನ ತಿದ್ದುಪಡಿ ಕಾಯಿದೆ - 


ಕೇಂದ್ರ ಮಂತ್ರಿ ಮಂಡಲದ ಸದಸ್ಯರ ಸಂಖ್ಯೆ ಲೋಕಸಭೆಯ ಒಟ್ಟು ಸದಸ್ಯರ ಪೈಕಿ ಶೇ.15 ನ್ನು ಮೀರುವಂತಿಲ್ಲ. 


🔰 ಸಂವಿಧಾನದ 89ನೇ ಸಂವಿಧಾನ ತಿದ್ದುಪಡಿ ಕಾಯಿದೆ - 

338ನೇ ವಿಧಿಗೆ ತಿದ್ದುಪಡಿ ತರುವುದರ ಮೂಲಕ ಪರಿಶಿಷ್ಟ ಜಾತಿಯವರಿಗೆ ಪ್ರತ್ಯೇಕ ರಾಷ್ಟ್ರೀಯ ಆಯೋಗ ರಚಿಸಲಾಯಿತು. 


🔰 ಸಂವಿಧಾನದ 86ನೇ ಸಂವಿಧಾನ ತಿದ್ದುಪಡಿ ಕಾಯಿದೆ - 

51ಎ ವಿಧಿಯನ್ನು ಅಳವಡಿಸಿ 6-14 ವರ್ಷಗಳವರೆಗಿನ ಮಕ್ಕಳಿಗೆ ಶಿಕ್ಷಣವನ್ನು ಒದಗಿಸುವುದು. 


🔰 ಸಂವಿಧಾನದ 73&74ನೇ ಸಂವಿಧಾನ ತಿದ್ದುಪಡಿ ಕಾಯಿದೆ - 

ಈ ಕಾಯ್ದೆಯನ್ನು ಪಂಚಾಯತ್ ರಾಜ್ ಹಾಗೂ ಮುನ್ಸಿಪಲ್ ಕಾಯ್ದೆ ಎಂದು ಕರೆಯುತ್ತಾರೆ. 


🔰 ಸಂವಿಧಾನದ 71ನೇ ಸಂವಿಧಾನ ತಿದ್ದುಪಡಿ ಕಾಯಿದೆ - 

ಕೊಂಕಣಿ, ಮಣಿಪುರಿ, ಮತ್ತು ನೇಪಾಳಿ ಭಾಷೆಗಳನ್ನು ಸಂವಿಧಾನದ 08ನೇ ಅನುಸೂಚಿಗೆ ಸೇರಿಸಲಾಯಿತು. 


🔰 ಸಂವಿಧಾನದ 61ನೇ ಸಂವಿಧಾನ ತಿದ್ದುಪಡಿ ಕಾಯಿದೆ - 

ಈ ಕಾಯ್ದೆ ಮತದಾನದ ವಯಸ್ಸನ್ನು 21 ವರ್ಷಗಳಿಂದ 18 ವರ್ಷಗಳಿಗೆ ಇಳಿಸಲಾಯಿತು. 


🔰 ಸಂವಿಧಾನದ 52ನೇ ಸಂವಿಧಾನ ತಿದ್ದುಪಡಿ ಕಾಯಿದೆ - 

ಇದು 10ನೇ ಅನುಸೂಚಿಯಲ್ಲಿ  ಪಕ್ಷಾಂತರ ನಿಷೇಧ (1985) ಕಾಯ್ದೆಯನ್ನು ಒಳಗೊಂಡಿದೆ. 


🔰 ಸಂವಿಧಾನದ 21ನೇ ಸಂವಿಧಾನ ತಿದ್ದುಪಡಿ ಕಾಯಿದೆ- 

ಸಿಂಧಿ ಭಾಷೆಯನ್ನು 15ನೇ ಭಾಷೆಯನ್ನಾಗಿ 08ನೇ ಅನುಸೂಚಿಗೆ ಸೇರ್ಪಡೆ ಮಾಡಲಾಯಿತು. 


✅ಸಂವಿಧಾನದ 44ನೇ ಸಂವಿಧಾನ ತಿದ್ದುಪಡಿ ಕಾಯಿದೆ 👇👇 


🔷 ಆಂತರಿಕ ಎಂಬ ಪದವನ್ನು ತೆಗೆದು ಹಾಕಿ ಸಶಸ್ತ್ರ ಬಂಡಾಯ ಎಂಬ ಪದವನ್ನು ಸೇರಿಸಲಾಯಿತು. 


🔷 ಆಸ್ತಿಯ ಹಕ್ಕನ್ನು ಮೂಲಭೂತ ಹಕ್ಕುಗಳ ಪಟ್ಟಿಯಿಂದ ತೆಗೆದು‌ ಹಾಕಿ 300A ವಿಧಿಯಲ್ಲಿ ಸೇರಿಸಲಾಯಿತು. 


🔷20&21ನೇ ವಿಧಿಗಳಲ್ಲಿ ಕಂಡುಬರುವ ಮೂಲಭೂತ ಹಕ್ಕುಗಳನ್ನು ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿಯೂ ರದ್ದುಗೊಳಿಸದಂತೆ ಮಾಡಲಾಯಿತು. 


✅ಸಂವಿಧಾನದ 42ನೇ ಸಂವಿಧಾನ ತಿದ್ದುಪಡಿ ಕಾಯಿದೆ 👇👇


🔷 ಸಮಾಜವಾದಿ, ಜಾತ್ಯಾತೀತ ಮತ್ತು ಸಮಗ್ರತೆ ಎಂಬ ಮೂರು ಹೊಸ ಪದಗಳನ್ನು ಸಂವಿಧಾನದ ಪ್ರಸ್ತಾವನೆಗೆ ಸೇರಿಸಲಾಯಿತು. 


🔷 ಸಂವಿಧಾನಕ್ಕೆ 14-ಎ ಭಾಗವನ್ನು ಸೇರಿಸುವುದರ ಮೂಲಕ ಆಡಳಿತಾತ್ಮಕ ಹಾಗೂ ಇತರೆ ಟ್ರಿಬ್ಯುನಗಳ ರಚನೆಗೆ ಅವಕಾಶ ನೀಡಲಾಯಿತು. 


🔷 ಐದು ವಿಷಯಗಳನ್ನು ರಾಜ್ಯಪಟ್ಟಿಯಿಂದ ಸಮವರ್ತಿ ಪಟ್ಟಿಗೆ ವರ್ಗಾಯಿಸಲಾಯಿತು. [ಶಿಕ್ಷಣ, ಅರಣ್ಯ, ಅಳತೆ ಮತ್ತು ತೂಕ, ವನ್ಯಜೀವಿ ಮತ್ತು ಪಕ್ಷಿಗಳ ಸಂರಕ್ಷಣೆ, ಉಳಿದ ನ್ಯಯಾಲಯಗಳ (ಸರ್ವೋಚ್ಚ ಹಾಗೂ ಉಚ್ಚ ನ್ಯಾಯಾಲಯ ಹೊರತುಪಡಿಸಿ) ರಚನೆ ಮತ್ತು ಅಧಿಕಾರ]. 


🔷 ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಗಳ ನ್ಯಾಯಿಕ ವಿಮರ್ಶೆ ಮತ್ತು ವಿಶೇಷ ಆಜ್ಞೆಗಳ ವ್ಯಾಪ್ತಿಯನ್ನು ಮೊಟಕುಗೊಳಿಸಲಾಯಿತು. 


🔷 ಅಖಿಲ ಭಾರತ ನ್ಯಾಯಾಂಗ ಸೇವೆಗಳ ಸೃಷ್ಟಿಗೆ ಅವಕಾಶ ಮಾಡಲಾಯಿತು. 


🔷 ಇದನ್ನು "ಮಿನಿ ಸಂವಿಧಾನ" ಎಂದು ಕರೆಯುತ್ತಾರೆ. ಈ ತಿದ್ದುಪಡಿಯನ್ನು ಇಂದಿರಾಗಾಂಧಿಯವರ ನೇತೃತ್ವ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಸೇರಿಸಲಾಯಿತು. 


🔷 ಸಂವಿಧಾನದ 04ನೇ ಭಾಗಕ್ಕೆ 03 ಹೊಸ ರಾಜ್ಯ ನಿರ್ದೇಶಕ ತತ್ವಗಳನ್ನು ಸೇರ್ಪಡೆ ಮಾಡಲಾಯಿತು. 


👉 ಎಲ್ಲರಿಗೂ ಸಮಾನ ನ್ಯಾಯ ಹಾಗೂ ದುರ್ಬಲರಿಗೆ ಉಚಿತ ಕಾನೂನು ನೆರವು (39-ಎ) 


👉 ಉದ್ದಿಮೆಗಳ ವ್ಯವಸ್ಥಾಪನೆಯಲ್ಲಿ ಪಾಲ್ಗೊಳ್ಳಲು ಕಾರ್ಮಿಕರಿಗೆ ಅವಕಾಶ ನೀಡುವುದು (43-ಎ) 


👉 ಪರಿಸರ, ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ (48ಎ) 


🔷 ಭಾರತದ ಯಾವುದೇ ಭಾಗದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಲು ಅವಕಾಶ ನೀಡಲಾಯಿತು. 

Post a Comment

0 Comments