TET 3-2-2019 ರಂದು ನಡೆದ ಸಮಾಜ ವಿಜ್ಞಾನ ಭಾಗದ ಬೋಧನಾ ಶಾಸ್ತ್ರದ ಪ್ರಶ್ನೋತ್ತರಗಳು

TET 3-2-2019 ರಂದು ನಡೆದ ಸಮಾಜ ವಿಜ್ಞಾನ ಭಾಗದ ಬೋಧನಾ ಶಾಸ್ತ್ರದ ಪ್ರಶ್ನೋತ್ತರಗಳು



1) ಇತಿಹಾಸ ವೈಜ್ಞಾನಿಕ ಅಧ್ಯಯನ ಮತ್ತು ಗತಕಾಲದ ಸಂಪೂರ್ಣ ಅಧ್ಯಯನ ಎಂದವರು? ಘೋಶ್

2) ಕಾಲ, ಸ್ಥಳ, ಮತ್ತು ಸಮಾಜದ,  ಪ್ರಜ್ಞೆಯನ್ನು ಮೂಡಿಸುವ ವಿಷಯ?
 ಇತಿಹಾಸ

3) ಘಟನೆಗಳು ಮತ್ತು ವರ್ಷವನ್ನು ಪ್ರಸ್ತುತ ದಿಂದ ಹಿಂದಕ್ಕೆ ಕ್ರಮಾನುಗತವಾಗಿ ಪ್ರತಿನಿಧಿಸುವ ಕಾಲರೇಖೆ?
 ಪ್ರತಿಗಾಮಿ ಕಾಲರೇಖೆ

4) ಹೋಲಿಸುವುದು ಮತ್ತು ವ್ಯತ್ಯಾಸುವುನು ಎಂಬ ನಿರ್ದಿಷ್ಟ ಕವು ಕಂಡುಬರುವ ಬೋಧನ ಉದ್ದೇಶ?
 ತಿಳುವಳಿಕೆ

5) ರಾಷ್ಟ್ರೀಯ ಭಾವೈಕ್ಯತೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಲು ಸಹಾಯಕವಾಗುವ ವಿಷಯ?
 ಇತಿಹಾಸ

6) ಯೋಜನಾ ವಿಧಾನದ ಕಡೆಯ ಹಂತವೆಂದರೆ?
 ಯೋಜನೆಯನ್ನು ದಾಖಲಿಸುವುದು

7) ಸಮಸ್ಯೆ ಪರಿಹಾರ ವಿಧಾನದ ಮೊದಲ ಹಂತವೆಂದರೆ?
 ಸಮಸ್ಯೆಯನ್ನು ಗುರುತಿಸುವುದು

8) ಯೋಜನಾ ವಿಧಾನವನ್ನು ಅಭಿವೃದ್ಧಿಪಡಿಸಿ ಮತ್ತು ಪರಿಪೂರ್ಣ ಗೊಳಿಸಿದವರು?
 ಕಿಲ್ ಪ್ಯಾಟ್ರಿಕ್

9)ತಮ್ಮ ಸ್ಥಳ, ಪರ್ವತಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಗೌರವವನ್ನು ವೃದ್ಧಿಸಲು ಸಹಾಯ ಮಾಡುವ ಭೂಗೋಳಶಾಸ್ತ್ರದ ಬೋಧನಾ ವಿಧಾನ?
 ಪ್ರಾಂತೀಯ ವಿಧಾನ

10) ಕಲಿಕಾರ್ಥಿ ತಮ್ಮ ಬಾಹ್ಯ  ಸ್ಥಿತಿಯ ನಡುವಿನ ಪ್ರತಿಕ್ರಿಯಾತ್ಮಕ ಪರಿಸರವನ್ನು ಹೀಗೆಂದು ಕರೆಯಬಹುದು?
 ಕಲಿವಿನ ಅನುಭವಗಳು

11) ಪ್ರೇಕ್ಷಪಿತ ಸಲಕರಣೆಗಳ ಉದಾಹರಣೆ?
 ಸ್ಲ್ಯಡ್

12) ಇತ್ತೀಚಿನ ವಿದ್ಯಮಾನಗಳನ್ನು ಪ್ರದರ್ಶಿಸಲು ಬಳಸುವ ಸಾಧನ?
 ಬುಲೆಟಿನ್ ಬೋರ್ಡ್/ ವಾರ್ತಾ ಫಲಕ

13) ಸಮಾಜ ವಿಜ್ಞಾನ ವಿಷಯವನ್ನು ನಿರಂತರ ವೃತ್ತವಾಗಿ ವ್ಯವಸ್ಥೆಗೊಳಿಸುವ ವ್ಯವಸ್ಥೆ?
*ಘಟಕ ಮಾರ್ಗ

14) ಸಂಘಟಿತ ತೀರ್ಮಾನ ತೆಗೆದುಕೊಳ್ಳುವ ಸೂಕ್ತ ವಿಧಾನ ಎಂದರೆ?
 ಚರ್ಚಾ ವಿಧಾನ

15) ಮೂರು ಆಯಾಮಗಳ ಬೋಧನಾ ಸಲಕರಣೆ ಉದಾಹರಣೆ?
 ಮಾದರಿ

16) ವಿದ್ಯಾರ್ಥಿಗಳಲ್ಲಿ ಸ್ಥಳದ ಸಂಬಂಧವನ್ನು ವೃದ್ಧಿಗೊಳಿಸಲು ಸಹಾಯ ಮಾಡುವ ಸಾಧನೆಯೆಂದರೆ?
ಭೂಪಟಗಳು

17) ವಿದ್ಯಾರ್ಥಿಗಳಲ್ಲಿ ಕಾಲ ಮತ್ತು ಸ್ಥಳದ ಬಗ್ಗೆ ಪ್ರಜ್ಞೆಯನ್ನು ವೃದ್ಧಿಸಲು ಇತಿಹಾಸವನ್ನು ಈ ವಿಷಯ ದೊಂದಿಗೆ ಸಹಸಂಬಂಧ ಹೊಂದಿರಬೇಕು?
 ಭೂಗೋಳಶಾಸ್ತ್ರ

18) ವಿದ್ಯಾರ್ಥಿಗಳಲ್ಲಿ ಕಲಿಕೆಯ ಮಟ್ಟವನ್ನು ಅಳೆಯುವ ಪರೀಕ್ಷಣ ಎಂದರೆ?
 ಸಾಧನ ಪರೀಕ್ಷೆ

19 ಕಲಿಕಾರ್ಥಿಯಲ್ಲಿ ಕಲಿಕೆಯ ಕೊರತೆ ಮತ್ತು ಸಮಸ್ಯೆಗಳನ್ನು ಪತ್ತೆಹಚ್ಚಲು ಸಹಾಯಮಾಡುವ ಪರೀಕ್ಷೆ?
 ನೈದಾನಿಕ ಪರೀಕ್ಷೆ

20) ಸ್ಪರ್ಧಾತ್ಮಕ ಸಹಕಾರ, ಒಪ್ಪಂದ. ಮತ್ತು ನಿರ್ದೇಶಿತ ಉದ್ದೇಶಗಳನ್ನು ಹೊಂದಿರುವ ಬೋಧನಾ ವಿಧಾನ?
 ಚರ್ಚಾ ವಿಧಾನ


Post a Comment

0 Comments