ಮೂಲಭೂತ ಹಕ್ಕುಗಳು

 ಮೂಲಭೂತ ಹಕ್ಕುಗಳು

 

ಭಾರತ ಸಂವಿಧಾನದ 3ನೇ ಭಾಗದಲ್ಲಿ 12 ರಿಂದ 35 ನೇ ವಿಧಿ ಗಳಲ್ಲಿ 6 ಮೂಲಭೂತ ಹಕ್ಕು ಗಳ ಬಗ್ಗೆ ಪ್ರಸ್ತಾಪಿಸಲಾಗಿದೆ.

💥 ಸಂವಿಧಾನದ ಮೂಲದಲ್ಲಿ 7 ಮೂಲಭೂತ ಹಕ್ಕು ಗಳಿದ್ದವು. ನಂತರ ಬಂದ ಜನತಾ ಸರ್ಕಾರವು  1978 ರಲ್ಲಿ ಸಂವಿಧಾನಕ್ಕೆ 44 ನೇ ತಿದ್ದುಪಡಿ ಯನ್ನು ತಂದು ಆಸ್ತಿಯ ಹಕ್ಕನ್ನು ಮೂಲಭೂತ ಹಕ್ಕುಗಳ ಪಟ್ಟಿಯಿಂದ ತೆಗೆದುಹಾಕಿತು.

ಪ್ರಸ್ತುತ 6 ಮೂಲಭೂತ ಹಕ್ಕುಗಳಿಗೆ ಅವುಗಳೆಂದರೆ
1. ಸಮಾನತೆಯ ಹಕ್ಕು
2. ಸ್ವಾತಂತ್ರ್ಯದ ಹಕ್ಕು
3. ಶೋಷಣೆಯ ವಿರುದ್ಧದ ಹಕ್ಕು
4. ಧಾರ್ಮಿಕ ಸ್ವಾತಂತ್ರ್ಯದ ಹಕ್ಕು
5. ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು
6. ಸಂವಿಧಾನಬದ್ಧ ಪರಿಹಾರದ ಹಕ್ಕು

💥 ಸಂವಿಧಾನದ ಮೂಲಭೂತ ಹಕ್ಕುಗಳ ರಕ್ಷಣೆಯನ್ನು ಸರ್ವೋಚ್ಚ ನ್ಯಾಯಾಲಯ ಕ್ಕೆ ನೀಡಿದೆ, ಆದ್ದರಿಂದ ಸರ್ವೋಚ್ಛ ನ್ಯಾಯಾಲಯ ವನ್ನು "ಭಾರತ ಸಂವಿಧಾನದ ರಕ್ಷಕ/ಕಾವಲುಗಾರ" ಎಂದು ಕರೆಯಲಾಗುತ್ತದೆ.

💥 ಮಯಾಗ್ನಕಾರ್ಟ್ ಎಂಬುದು 1215 ರಲ್ಲಿ ಇಂಗ್ಲೇಂಡಿನ ಜಾನ್ ದೊರೆ ಹೊರಡಿಸಿದ ಮೂಲಭೂತ ಹಕ್ಕುಗಳ ಪ್ರಣಾಳಿಕೆಯಾಗಿದೆ.

💥ಆದ್ದರಿಂದ ಸಂವಿಧಾನದ 3ನೇ ಭಾಗವನ್ನು ಭಾರತದ ಮ್ಯಾಗ್ನಕಾರ್ಟ ಎನ್ನುವರು.

💥ಫರಾನ್ಸ್- 1789 ರಲ್ಲಿ ಮಾನವ ನಾಗರೀಕ ಹಕ್ಕು ಘೋಷಣೆ.

💥 ಅಮೇರಿಕ - 1791 ರಲ್ಲಿ 'ಬಿಲ್ ಆಫ್ ರೈಟ್ಸ್' ನ ಜಾರಿ.

💥 ವಶ್ವಸಂಸ್ಥೆ- 1948 ಡಿ.10ರಲ್ಲಿ ಸಾರ್ವತ್ರಿಕ ಮಾನವ ಹಕ್ಕು  ಘೋಷಣೆ

💥 1995 ರ ಭಾರತ ಸಂವಿಧಾನ ಬಿಲ್ ನಲ್ಲಿ ಪ್ರಸ್ತಾಪಿಸಲಾಗಿದೆ.

💥 1917 ರಿಂದ 1919 ರ ಭಾರತ ರಾಷ್ಟ್ರೀಯ ಕಾಂಗ್ರೇಸ್‍ ನ ನಿರ್ಣಯ.

💥 ಬಾಲಗಂಗಾಧರ ತಿಲಕ್ - 1985 ರಲ್ಲಿ ಸ್ವರಾಜ್ಯ ಬಿಲ್ ಹಕ್ಕುಗಳಿಗಾಗಿ ಒತ್ತಾಯ.

💥 ಅನಿಬೆಸೆಂಟ್ - 1925 ರಲ್ಲಿ ಕಾಮನ್ ವೆಲ್ತ್ ಆಫ್ ಇಂಡಿಯಾ ಬಿಲ್  ನಲ್ಲಿ ವ್ಯಕ್ತಿ ಸ್ವತಂತ್ರ, ಆತ್ಮಸಾಕ್ಷಿ, ಸ್ವತಂತ್ರ್ಯ, ವಾಕ್ ಸ್ವತಂತ್ರ್ಯ¸ ಕಾನೂನು ಮುಂದೆ ಸಮಾನತೆಯ ಹಕ್ಕುಗಳ ಬಗ್ಗೆ ಪ್ರಸ್ತಾಪ
.
💥 1928 ರಲ್ಲಿ ನೆಹರೂ ಸಮಿತಿಯ ಶಿಫಾರಸ್ಸು.

💥  ಕಯಾಬಿನೆಟ್ ಮಿಷನ್ 1946 ರಲ್ಲಿ ಮೂಲಭೂತ ಹಕ್ಕುಗಳ ಸಮಿತಿ ರಚಿಸುವಂತೆ ಸಲಹೆ.

💥 ನಂತರ ಮೂಲಭೂತ ಹಕ್ಕುಗಳ ರಚನಾಸಮಿತಿ ರಚನೆ ಸರ್ದಾರ್ ಪಟೇಲ್ ನೇತೃತ್ವ ದಲ್ಲಿ ಅಂತಿಮವಾಗಿ ಸಂವಿಧಾನಕ್ಕೆ ಸೇರಿಸಲಾಯಿತು.

💥ಮೂಲಭೂತಗಳು ಉಪಸಮಿತಿ ಅಧ್ಯಕ್ಷರು= ಜೆ.ಬಿ ಕೃಪಲಾನಿ

🌸ಸಮಾನತೆ ಹಕ್ಕು= 14-18🌸

💥 14ನೇ ವಿಧಿ ಅನ್ವಯ:- "ಕಾನೂನಿನ ಎದುರಿನಲ್ಲಿ ಸಮಾನತೆ ಮತ್ತು ರಕ್ಷಣೆ"

💥  15ನೇ ವಿಧಿ ಅನ್ವಯ:-  "ಸಾರ್ವಜನಿಕ ಸ್ಥಳಗಳಲ್ಲಿ ತಾರತಮ್ಯ ನಿಷೇಧ"

💥 16ನೇ ವಿಧಿ ಅನ್ವಯ:- ಯಾವುದೇ ವ್ಯಕ್ತಿಗೆ "ಸಾರ್ವಜನಿಕ ಹುದ್ದೆಯಲ್ಲಿ ತಾರತಮ್ಯ ನಿಷೇಧ"  t

💥 17ನೇ ವಿಧಿ ಅನ್ವಯ:-  "ಅಸ್ಪಶ್ಯತೆಯ ಆಚರಣೆಯ ನಿಷೇಧ"
 -1955 ರಲ್ಲಿ ಅಸ್ಪಶ್ಯತಾ ನಿವಾರಣ ಕಾಯ್ದೆ ಜಾರಿಗೆ ತರಲಾಗಿದೆ. ಈ ಕಾಯ್ದೆಯನ್ನು "ನಾಗರೀಕ ಹಕ್ಕುಗಳ ರಕ್ಷಣಾ ಕಾಯ್ದೆ" ಎಂದು ಕರೆಯಲಾಗುತ್ತದೆ.

💥 18ನೇ ವಿಧಿ ಅನ್ವಯ:-  "ಬಿರುದುಗಳ ರದ್ದತಿ"

🌸 ಸವಾತಂತ್ರ್ಯದ ಹಕ್ಕು= 19-22 🌸

💥 19ನೇ ವಿಧಿ ಅನ್ವಯ:  19ನೇ ವಿಧಿ= 6 ವಿಧದ ಸ್ವತಂತ್ರವನ್ನು ಒದಗಿಸುತ್ತದೆ,   (19ನೇ ವಿಧಿಯನ್ನು  ಸಂವಿಧಾನದ ಬೆನ್ನೆಲುಬು ಎಂದು ಕರೆಯುತ್ತಾರೆ, )

1. ವಾಕ್‍ಸ್ವಾತಂತ್ರ್ಯ ಮತ್ತು ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ.
2. ಶಾಂತಿಯುತವಾಗಿ ಸಭೆ ಸೇರುವ ಸ್ವಾತಂತ್ರ್ಯ.
3. ಸಂಘಸಂಸ್ಥೆಗಳನ್ನು ಸ್ಥಾಪಿಸುವ ಸ್ವಾತಂತ್ರ್ಯ.
4. ದೇಶದ ಎಲ್ಲೆಡೆ ನಿರ್ಬಂಧವಿಲ್ಲದೆ ಸಂಚರಿಸುವ ಸ್ವಾತಂತ್ರ್ಯ.
5. ಭಾರತದ ಯಾವುದೇ ಭಾಗದಲ್ಲಾದರೂ ವಾಸಿಸುವ ಸ್ವಾತಂತ್ರ್ಯ.
6. ಯಾವುದೇ ಉದ್ಯೋಗ, ವೃತ್ತಿ, ವ್ಯಾಪಾರ, ವ್ಯವಹಾರ ಮಾಡುವ ಸ್ವಾತಂತ್ರ್ಯ.

💥 20ನೇ ವಿಧಿ= ಅಪರಾಧಿಗಳಿಗೆ ಸ್ವತಂತ್ರವನ್ನು ನೀಡುವುದು.

💥21ನೇ ವಿಧಿ=  ಜೀವಿಸುವ ಹಕ್ಕು

💥21ನೇ(A)ವಿಧಿ=  ಶಿಕ್ಷಣದ ಹಕ್ಕು(6ರಿಂದ 14 ವರ್ಷದ ಒಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಒದಗಿಸುವುದು), 86ನೇ ತಿದ್ದುಪಡಿ.2002ರಲ್ಲಿ

💥 22ನೇ ವಿಧಿ, = ಬಂಧನಕ್ಕೆ ಸಂಬಂಧಿಸಿದಂತೆ ಹಕ್ಕುಗಳು,

🌸 ಶೋಷಣೆ ವಿರುದ್ಧ ಹ ಕ್ಕು 23-24

💥23ನೇ ವಿಧಿ= ಜೀತಪದ್ಧತಿ ಮತ್ತು ಬಲಾತ್ಕಾರದ ದುಡಿಮೆ ನಿಷೇಧ

💥 24ನೇ ವಿಧಿ= ಬಾಲಕಾರ್ಮಿಕ ನಿಷೇಧ( 14 ವರ್ಷದ ಒಳಗಿನ ಮಕ್ಕಳು)

🌸 ಧಾರ್ಮಿಕ ಸ್ವಾತಂತ್ರ್ಯದ ಹಕ್ಕು=25-28 🌸

💥25ನೇ ವಿಧಿ= ಯಾವುದೇ ಧರ್ಮವನ್ನು ಸ್ವೀಕರಿಸುವ ಮತ್ತು ಪ್ರಚಾರಮಾಡುವ ಸ್ವತಂತ್ರ

💥 26ನೇ ವಿಧಿ= ಧಾರ್ಮಿಕ ಸಂಸ್ಥೆಗಳನ್ನು ಸ್ಥಾಪನೆ,

💥 27ನೇ ವಿಧಿ=  ಒತ್ತಾಯಪೂರ್ವಕವಾಗಿ ಧಾರ್ಮಿಕ ತೆರಿಗೆ ಹೇರುವಂತಿಲ್ಲ

💥28ನೇ ವಿಧಿ= ಸರಕಾರಿ ಶಾಲೆಗಳಲ್ಲಿ ಧಾರ್ಮಿಕ ಬೋಧನೆ ಮಾಡುವಂತಿಲ್ಲ, ಒಂದು ವೇಳೆ ಧಾರ್ಮಿಕ ಬೋಧನೆ ಮಾಡಬೇಕಾದರೆ ವಿದ್ಯಾರ್ಥಿಗಳ ಅನುಮತಿ ಪಡೆಯಬೇಕು, ಖಾಸಗಿ ಶಾಲೆಗಳಲ್ಲಿ ಧಾರ್ಮಿಕ ಬೋಧನೆ ಮಾಡಬಹುದು,

🌸  ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು=29-30 🌸

💥 29ನೇ ವಿಧಿ ಅನ್ವಯ - ರಾಷ್ಟ್ರದ ಯಾವುದೇ ಭಾಗದಲ್ಲಿ ನೆಲೆಸಿರುವ ಪ್ರಜೆಗಳು, ತಮ್ಮದೇ ಆದ ಭಾಷೆ, ಲಿಪಿ ಅಥವಾ ಸಂಸ್ಕೃತಿಯನ್ನು ಹೊಂದಿದ್ದರೆ. ಅವುಗಳನ್ನು ಸಂರಕ್ಷಿಸುವ ಮತ್ತು ಅಭಿವೃದ್ದಿಪಡಿಸಿಕೊಳ್ಳುವ ಹಕ್ಕು.

💥 ರಾಜ್ಯದಿಂದ ಧನಸಹಾಯ ಪಡೆಯುತ್ತಿರುವ ಯಾವುದೇ ಶೈಕ್ಷಣಿಕ ಸಂಸ್ಥೆಯು ಜಾತಿ, ಧರ್ಮ, ಕುಲ, ಭಾಷೆಗಳ ಆಧಾರದ ಮೇಲೆ ಯಾವ ಪೌರ ನಿಗೂ ಪ್ರವೇಶವನ್ನು ನಿರಾಕರಿಸುವಂತಿಲ್ಲ.

💥30ನೇ ವಿಧಿ ಅನ್ವಯ - ಧಾರ್ಮಿಕ ಅಥವಾ ಭಾಷಾ ಅಲ್ಪ ಸಂಖ್ಯಾತರು ತಮ್ಮದೇ ಆದ ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸಿ ಅವುಗಳನ್ನು ನಿರ್ವಹಿಸುವ ಹಕ್ಕು.

💥 31ನೇ ವಿಧಿ ರದ್ದತಿ - ಆಸ್ತಿಯ ಹಕ್ಕು 1978. ಸಂವಿಧಾನಕ್ಕೆ 44ನೇ ತಿದ್ದುಪಡಿ ತಂದು ಮೂಲಭೂತ ಹಕ್ಕುಗಳ ಪಟ್ಟಿಯಿಂದ ತೆಗೆಯಲಾಗಿದೆ.
 ಈಗ ಕೇವಲ ಕಾಯ್ದೆ ಬದ್ಧ ಹಕ್ಕಾ ಗಿದೆ.

32ನೇ ವಿಧಿ ಸವಿಧಾನ ಪರಿಹಾರ ಹಕ್ಕು ಗಳಲ್ಲಿ ಪ್ರಮುಖ ರಿಟ್ ಗಳು ಬರುತ್ತವೆ,
 ಸರ್ವೋಚ್ಚ ನ್ಯಾಯಾಲಯವು  5 ರೀತಿಯ ರಿಟ್ ಗಳನ್ನು ಹೊರಡಿಸುತ್ತದೆ
ಅವು

1. ಬಂಧಿ ಪ್ರತ್ಯಕ್ಷೀಕರಣ
2. ಪರಮಾದೇಶ
3. ಪ್ರತಿಬಂಧಕಾಜ್ಞೆ
4. ಷರ್ಷಿಯೊರರಿ
5. ಕೋ-ವಾರೆಂಟ್


Post a Comment

0 Comments