ಅನ್ನಭಾಗ್ಯ ಯೋಜನೆ

     ಅಂತ್ಯೋದಯ ಮತ್ತು ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಈ ಯೋಜನೆಯಡಿ ಕುಟುಂಬದ ಸದಸ್ಯರಿಗೆ ಪ್ರತಿ ಕೆಜಿಗೆ ರೂ.1 ರಂತೆ ಗರಿಷ್ಠ 30 ಕೆ.ಜಿ ಅಕ್ಕಿಯನ್ನು ನೀಡಲಾಗುವುದು. ಕುಟುಂಬದಲ್ಲಿ ಒಬ್ಬ ಸದಸ್ಯನಿದ್ದರೆ 10 ಕೆಜಿ, ಇಬ್ಬರು ಸದಸ್ಯರಿದ್ದರೆ 20 ಕೆಜಿ, ಹಾಗೂ ಇಬ್ಬರಿಗಿಂತ ಹೆಚ್ಚಿದ್ದರೆ 30 ಕೆ ಜಿ ಅಕ್ಕಿಯನ್ನು ನೀಡಲಾಗುವುದು.
        ರಾಜ್ಯದಲ್ಲಿ ಒಟ್ಟು 98 ಲಕ್ಷ ಫಲಾನುಭವಿಗಳು ಅನ್ಯಭಾಗ್ಯ ಯೋಜನೆಯ ಲಾಭ ಪಡೆಯಲಿದ್ದಾರೆ. ಇದರಲ್ಲಿ 86.89 ಲಕ್ಷ ಬಿ.ಪಿ.ಎಲ್ ಕಾರ್ಡ್ ದಾರರಾದರೆ, 11.11 ಲಕ್ಷ ಅಂತ್ಯೋದಯ ಅನ್ನ ಯೋಜನೆ ಕಾರ್ಡ್ ದಾರರಿದ್ದಾರೆ. ಪ್ರತಿ ತಿಂಗಳು 2.80 ಲಕ್ಷ ಟನ್ ಅಕ್ಕಿ ವಿತರಣೆಯಾಗುತ್ತಿದೆ. 20 ಸಾವಿರ ಟನ್ ಅಕ್ಕಿ ಕೇಂದ್ರದಿಂದ ಹೆಚ್ಚುವರಿಯಾಗಿ ದೊರೆತಿದೆ. ಛತ್ತೀಸ್ ಗಢದಿಂದ 25 ಸಾವಿರ ಟನ್ ಅಕ್ಕಿ ಖರೀದಿಯಾಗಿದೆ. ಈ ಯೋಜನೆಯಿಂದ ಸರ್ಕಾರಕ್ಕೆ ವಾರ್ಷಿಕ ರೂ. 4200 ಕೋಟಿ ವೆಚ್ಚವಾಗಲಿದೆ.

Post a Comment

0 Comments