ಆಫ್ರಿಕಾ ಖಂಡ

  • ಭೂಖಂಡ : ಆಫ್ರಿಕಾ (Africa)
  • ವಿಸ್ತೀರ್ಣ : 11,668,559 ಚ.ಕಿ.ಮೀ
  • ರಾಷ್ಟ್ರಗಳು : 54
  • ಜನಸಂಖ್ಯೆ : 1,032,532,974 (2011 ರಲ್ಲಿ)
  • ಅತಿ ದೊಡ್ಡ ರಾಷ್ಟ್ರ : ಅಲ್ಜೀರಿಯಾ
  • ಅತ್ಯಂತ ಚಿಕ್ಕ ರಾಷ್ಟ್ರ : ಸೆಚೆಲ್ಲಸ್
  • ಅತ್ಯಂತ ಬಡ ರಾಷ್ಟ್ರ : ಕಾಂಗೋ
  • ಅತ್ಯಂತ ಶ್ರೀಮಂತ ರಾಷ್ಟ್ರ : ಇಕ್ವಾಟೋರಿಯಲ್ ಗಿನಿಯಾ
  • ಅಕ್ಷಾಂಶ-ರೇಖಾಂಶ : 37.21 ಉತ್ತರ ಅಕ್ಷಾಂಶದಿಂದ 34.51.15 ಅಕ್ಷಾಂಶದವರೆಗೆ & 51.27.52 ಪೂರ್ವ ರೇಖಾಂಶದಿಂದ 17.33.22 ಪಶ್ಚಿಮ ರೇಖಾಂಶದವರೆಗೆ.
  • ಪ್ರಮುಖ ಭಾಷೆಗಳು : ಅರೇಬಿಕ್, ಪೋರ್ಚುಗೀಸ್, ಫ್ರೆಂಚ್, ಕಿರುಂಡಿ, ಇಂಗ್ಲಿಷ್, ಸ್ಪ್ಯಾನಿಶ್, ಅಮ್ಹಾರಿಕ್, ಮಲಗಾಸ್ಯ, ರ್ವಾಂಡ, ಸೋಮಾಲಿ ಇತ್ಯಾದಿ. 
  • ಪ್ರಮುಖ ಧರ್ಮಗಳು : ಕ್ರೈಸ್ತ, ಇಸ್ಲಾಂ, ಜ್ಯುಡಿಯಿಸಂ, ಹಿಂದೂ, ಡ್ರಿಯೋಡ್ರಿ, ನ್ಯೂ ಏಜ್.
  •  ಪ್ರಮುಖ ಬೆಳೆಗಳು :ಸಿಟ್ರಸ್ ಹಣ್ಣುಗಳು, ಮೆಕ್ಕೆಜೋಳ, ಗೋಧಿ, ಕಬ್ಬು, ತಂಬಾಕು ಹಾಗೂ ವೈನ್ ಇತ್ಯಾದಿ.
  • ಬುಡಕಟ್ಟು ಜನಾಂಗಗಳು : ಬೆಡೋಯಿನ್, ಡಿಂಕಾ, ಎಬೋಕಿ, ಮುರ್ಷಿ, ಲೌರ್ಗೆ, ಮೊಶುಕುಲಾ ಇತ್ಯಾದಿ.
  • ಪ್ರಮುಖ ನದಿಗಳು : ನೈಲ್, ನೈಗರ್, ಕಾಂಗೋ, ಜಾಂಬೆಜಿ, ಆರೆಂಜ್ ಇತ್ಯಾದಿ.
  • ಪ್ರಮುಖ ಮರುಭೂಮಿ : ಅಲ್ಜೇರಿಯನ್, ಬ್ಲೂ, ಕಲಹರಿ, ಲಿಬ್ಯಾನ್, ನಮೀಬ್, ಒವಾಮಿ, ಸಹರಾ, ನಬಿಯನ್ ಇತ್ಯಾದಿ.
  • ಪ್ರಮುಖ ಪ್ರಾಣಿಗಳು : ಆಫ್ರಿಕನ್ ಬಫೆಲೋ, ಚಿರತೆ, ಆಫ್ರಿಕನ್ ಲಿಯೋಪಾರ್ಡ್, ಆಫ್ರಿಕನ್ ಆನೆ, ಜಿರಾಫೆ, ವಿಲ್ಡ್ ಬೀಸ್ಟ್, ಝೀಬ್ರಾ ಇತ್ಯಾದಿ.
  • ಮುಖ್ಯ ಸರೋವರಗಳು : ವಿಕ್ಟೋರಿಯಾ, ಆಲ್ಬರ್ಟ್, ಟಾಂಗಾನಿಕಾ, ನ್ಯಾಸಾ ಎಡ್ವರ್ಡ್ ಮತ್ತು ರುಡಾಲ್ಫ್ ಮುಂತಾದವು.
  • ಪ್ರಮುಖ ಮರಗಳು : ಮಹಾಗನಿ, ಬೀಟೆ, ಎಬೋನಿ, ಸೀಡಾರ್, ಲಾರೆನ್ ಮತ್ತು ಓಕ್ ಮುಂತಾದವು.
  • ಹುಲ್ಲುಗಾವಲುಗಳು : ಸವನ್ನಾ ಮತ್ತು ವೆಲ್ಡ್ ಹುಲ್ಲುಗಾವಲು.
  • ಮುಖ್ಯ ಪರ್ವತ ಶ್ರೇಣಿಗಳು : ಅಟ್ಲಾಸ್, ಕ್ಯಾಮೆರೂನ್, ಇಥಿಯೋಪಿಯಾ, ಕೀನ್ಯಾ, ಮೊರಾಕ್ಕೋ, ನೈಜೀರಿಯಾ ಪರ್ವತ ಶ್ರೇಣಿಗಳು ಇತ್ಯಾದಿ. 
  • ಇತರೆ ಮಾಹಿತಿಗಳು : ಆಫ್ರಿಕಾ ಖಂಡವು ವಿಸ್ತಾರ ಮತ್ತು ಜನಸಂಖ್ಯೆಗೆ ಪ್ರಪಂಚದ 2ನೆಯ ಅತಿ ದೊಡ್ಡ ಖಂಡವಾಗಿದೆ. ಪ್ರಪಂಚದ ಒಟ್ಟು ಭೂಭಾಗದ 5.1 ರಷ್ಟು ವಿಸ್ತೀರ್ಣ ಹೊಂದಿದೆ. ಪೂರ್ವದಲ್ಲಿ ಹಿಂದೂ ಮಹಾಸಾಗರ, ಪಶ್ಚಿಮದಲ್ಲಿ ಅಟ್ಲಾಂಟಿಕ್ ಸಾಗರ, ಉತ್ತರದಲ್ಲಿ ಮೆಡಿಟರೇನಿಯನ್ ಸಮುದ್ರ, ದಕ್ಷಿಣದಲ್ಲಿ ದಕ್ಷಿಣ ಮಹಾಸಾಗರ (ಅಂಟಾರ್ಟಿಕ್ ಮಹಾಸಾಗರ ) ದಿಂದ ಸುತ್ತುವರಿಯಲ್ಪಟ್ಟಿದೆ.


Post a Comment

0 Comments