ಲೋಹ ದ ಅಧ್ಯಾಯಕ್ಕೆ ಸಂಬಂಧಿಸಿದ ಪ್ರಶ್ನೆಗಳು

ಲೋಹ ದ ಅಧ್ಯಾಯಕ್ಕೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಬಹುದಾದ ಪ್ರಶ್ನೆಗಳು

1) ಬೆಳ್ಳಿಯ ವಸ್ತುಗಳನ್ನು ಗಾಳಿಗೆ ತೆರೆದಿಟ್ಟರೆ ಕೆಲಕಾಲದ ನಂತರ ಕಪ್ಪಾಗಿ ಕಾಣಲು ಕಾರಣ ಗಾಳಿಯೊಂದಿಗೆ ಬೆಳ್ಳಿ ವರ್ತಿಸಿ ಈ ಕೆಳಗಿನ ಯಾವ ಸಂಯುಕ್ತದ ಕವಚ ಉಂಟಾಗಿದೆ? 
👉 ಸಿಲ್ವರ್ ಸಲ್ಫೈಡ್

2) ರೈಲ್ವೆ ಹಳಿಯಲ್ಲಿ ಬಿರುಕು ಬಿಟ್ಟಾಗ ಅಥವಾ ಯಂತ್ರದ ಬಿಡಿಭಾಗಗಳನ್ನು ಜೋಡಿಸಲು ಬಳಸುವ ಕ್ರಿಯೆ? 
👉 ಥರ್ಮಿಟ್ ಕ್ರಿಯೆ
(Thermit reaction)

3) ಕಬ್ಬಿಣವು ತುಕ್ಕು ಹಿಡಿಯುವುದನ್ನು ತಡೆಯಲು ಗಾಲ್ವಿನೀಕರಣ ವಿಧಾನದಲ್ಲಿ ಕಬ್ಬಿನ ಅಥವಾ ಉಕ್ಕಿನ ಮೇಲ್ಪದರಕ್ಕೆ ಈ ಕೆಳಗಿನ ಯಾವ ಲೋಹದ ಪದರವನ್ನು ಲೇಪಿಸಿರುತ್ತಾರೆ? 
👉 ಸತು(Zinc)

4) ದ್ರವರೂಪದ ಲೋಹಗಳು? 
👉 ಪಾದರಸ ಮತ್ತು ಗ್ಯಾಲಿಯಮ್

5) ಲೋಹಗಳು ದುರ್ಬಲ ಆಮ್ಲದೊಂದಿಗೆ ವರ್ತಿಸಿದಾಗ ಬಿಡುಗಡೆಯಾಗುವ ಅನಿಲ? 
👉 ಜಲಜನಕ

6) ಅಮಾಲ್ಗಮ್ ನ್ನು ತಯಾರಿಸಲು ಲೋಹದೊಂದಿಗೆ  ಈ ಕೆಳಗಿನ ಯಾವ ಲೋಹ ಬೆರೆಸುತ್ತಾರೆ? 
👉 ಪಾದರಸ

7) ಭೂಮಿಯ ಮೇಲ್ಪದರದ ಮೇಲೆ ಹೇರಳವಾಗಿ ದೊರೆಯುವ ಲೋಹ? 
👉 ಅಲ್ಯುಮಿನಿಯಂ

8) ಸೀಮೆಎಣ್ಣೆಯಲ್ಲಿ ಶೇಖರಿಸಿಡುವ ಲೋಹಗಳು? 
👉 ಸೋಡಿಯಂ ಮತ್ತು ಪೊಟ್ಯಾಷಿಯಂ

9) ಬಹುತೇಕ ಲೋಹಗಳು ನೈಟ್ರಿಕ್ ಆಮ್ಲದೊಂದಿಗೆ ವರ್ತಿಸುತ್ತದೆ ಆದರೆ ಈ ಕೆಳಗಿನ ಲೋಹದೊಂದಿಗೆ ವರ್ತಿಸುವುದಿಲ್ಲ? 
👉 ಚಿನ್ನ

10) ದ್ರವರಾಜ( ಅಕ್ವೇರಿಜಿಯಾ)ವು ಈ ಕೆಳಗಿನ ಯಾವುದರ ಮಿಶ್ರಣವಾಗಿದೆ? 
👉 1:3ರ ಅನುಪಾತದಲ್ಲಿ ಹೈಡ್ರೋಕ್ಲೋರಿಕ್ ಆಮ್ಲ ಮತ್ತು ನೈಟ್ರಿಕ್ ಆಮ್ಲದ ಮಿಶ್ರಣ

11) ಶುದ್ಧ ರೂಪದಲ್ಲಿ ಪ್ರಕೃತಿಯಲ್ಲಿ ದೊರೆಯುವ ಎರಡು ಲೋಹಗಳು? 
👉 ಚಿನ್ನ ಮತ್ತು ಬೆಳ್ಳಿ

12) ಯಾವ ಕಾರಣಕ್ಕಾಗಿ ಲೋಹವಾದ ಪಾದರಸವನ್ನು ಕಬ್ಬಿಣದ ಮಡಿಕೇಯಲ್ಲಿ  ಸಂಗ್ರಹಿಸಿಡುತ್ತಾರೆ? 
👉 ಕಬ್ಬಿಣವು ಪಾದರಸ ದೊಂದಿಗೆ ವರ್ತಿಸಿ ಅಮಾಲ್ಗಮ್ ಆಗೋದಿಲ್ಲ

13) "ಮಿನಿಮಾಟ" ರೋಗವು ಈ ಕೆಳಗಿನ ಯಾವ ಲೋಹದ ಅಥವಾ ಕಲುಷಿತ ಆಹಾರದ ಮೂಲಕ ಮಾನವನ ದೇಹ ಸೇರಿದಾಗ ಬರುತ್ತದೆ? 
👉 ಪಾದರಸ

14) "ಮೂರ್ಖರ ಚಿನ್ನ" ಎಂದು ಕರೆಯಲ್ಪಡುವುದು? 
👉 ಐರನ್ ಪೈರೇಟ್

15) ರಕ್ತ ವರ್ಣಕ ಹಿಮೋಗ್ಲೋಬಿನ್ ನಲ್ಲಿರುವ ಲೋಹ? 
👉 ಕಬ್ಬಿನ

16) ಸಸ್ಯದಲ್ಲಿರುವ ಕ್ಲೋರೋಪ್ಲಾಸ್ಟ್ ನಲ್ಲಿರುವ ಲೋಹ? 
👉 ಮೆಗ್ನೀಷಿಯಂ

17) "ಕ್ವಿಕ್ ಸಿಲ್ವರ್" ಎಂದು ಕರೆಯಲ್ಪಡುವ ಲೋಹ? 
👉 ಪಾದರಸ

18) ವಿದ್ಯುತ್ ಬಲ್ಬ್ ಇನಲ್ಲಿ ಟಂಗಸ್ಟನ್ ಲೋಹ ಬಳಸಲು ಪ್ರಮುಖ ಕಾರಣ? 
👉 ಟಂಗಸ್ಟನ್ ಅತಿಹೆಚ್ಚಿನ ದ್ರವದ ಬಿಂದು ಹೊಂದಿದ್ದು ಹೆಚ್ಚಿನ ವಿದ್ಯುತ್ ರೋಧ ಶಕ್ತಿಯನ್ನು ಹೊಂದಿದೆ

19) ಬೆಳ್ಳಿ ಪಾದರಸದ ಅಮಾಲ್ಗಮ್ ಅನ್ನು ಈ ಕೆಳಗಿನ ಸಂದರ್ಭದಲ್ಲಿ ಬಳಸುತ್ತಾರೆ? 
👉 ದಂತು ಕುಳಿಯನ್ನು ತುಂಬಲು

20) ಕೃತಕ ಮಳೆಬರಿಸಲು  ಯಾವ ರಾಸಾಯನಿಕ ಬಳಸಲಾಗುವುದು? 
👉 ಸಿಲ್ವರ್ ಐಯೋಡೈಡ್

21) ಅಡುಗೆ ಸೋಡಾದ ರಾಸಾಯನಿಕ ಹೆಸರು? 
👉 ಸೋಡಿಯಂ ಬೈ ಕಾರ್ಬೊನೇಟ್

22) ಕೃತಕ ಇಸ್ಕಾನ್ ತಯಾರಿಸಲು ಬಳಸುವ ಮಿಶ್ರಲೋಹ? 
👉 ಅಲ್ನಿಕೋ

23) ಸೋಡಿಯಂ ಬೈ ಕಾರ್ಬೊನೇಟ್ ನ್ನು ಆಹಾರದ ಮೂಲಕ ಸೇವನೆ ಮಾಡುವುದರಿಂದ ಯಾವ ಅನಿಲ ಬಿಡುಗಡೆಯಾಗುತ್ತದೆ? 
👉 ಇಂಗಾಲ ಡೈ ಆಕ್ಸೈಡ್

24) ತಾಮ್ರದ ಒಂದಿಗೆ ತವರನ್ನು ಸೇರಿಸಿದಾಗ ಪಡೆಯಬಹುದಾದ ಮಿಶ್ರ ಯಾವುದು? 
👉 ಕಂಚು

Post a Comment

0 Comments