ಕನ್ನಡಪರ ಸೂಕ್ತಿಗಳು

*ಕನ್ನಡಪರ ಸೂಕ್ತಿಗಳು*

1. ಆರಂಕುಸಮಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ -ಪಂಪ
2. ಕನ್ನಡಮೆನಿಪ್ಪಾ ನಾಡು ಚೆಲ್ವಾಯ್ತು -ಆಂಡಯ್ಯ
3. ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ -ಶ್ರೀ
4. ಕನ್ನಡ ನುಡಿ, ನಮ್ಮ ಹೆಣ್ಣು, ನಮ್ಮ ತೋಟದಿನಿಯ ಹಣ್ಣು -ಶ್ರೀ
5. ಕನ್ನಡಿಗರಿಗೆ ಕನ್ನಡವೇ ಗತಿ ಅನ್ಯಥಾ ಶರಣಂ ನಾಸ್ತಿ -ಶ್ರೀ
6. ತನು ಕನ್ನಡ, ಮನ ಕನ್ನಡ, ನುಡಿ ಕನ್ನಡವೆಮ್ಮವು –ಗೋವಿಂದ ಪೈ
7. ಕನ್ನಡದ ನೆಲದ ಪುಲ್ಲೆನಗೆ ಪಾವನ ತುಲಸಿ -ಸಾಲಿ ರಾಮಚಂದ್ರರಾಯರು
8. ಕನ್ನಡದ ನೆಲದ ಕಲ್ಲೆನಗೆ ಶಾಲಿಗ್ರಾಮ ಶಿಲೆ -ಸಾಲಿ ರಾಮಚಂದ್ರರಾಯರು
9. ಕನ್ನಡದ ನುಡಿಯೆ ಗಾಯತ್ರಿಯದ್ಭುತ ಮಂತ್ರ -ಸಾಲಿ ರಾಮಚಂದ್ರರಾಯರು
10. ಎನಿತು ಇನಿದು ಈ ಕನ್ನಡ ನುಡಿಯು –ಆನಂದಕಂದ
11. ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು -ಹುಯಿಲಗೋಳ ನಾರಾಯಣರಾವ್
12. ಕನ್ನಡವನುಳಿದೆನಗೆ ಅನ್ಯ ಜೀವನವಿಲ್ಲ -ಬೆನಗಲ್ ರಾಮರಾವ್
13. ಕನ್ನಡ ಎನೆ ಕುಣಿದಾಡುವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು –ಕುವೆಂಪು
14. ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು –ಕುವೆಂಪು
15. ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ –ಕುವೆಂಪು
16. ಕನ್ನಡ ನುಡಿ ಕುಣಿದಾಡುವ ಗೇಹ, ಕನ್ನಡ ತಾಯಿಯ ಮಕ್ಕಳ ದೇಹ! –ಕುವೆಂಪು
17. ಕನ್ನಡಕೆ ಹೋರಾಡು ಕನ್ನಡದ ಕಂದ –ಕುವೆಂಪು
18. ಬಾರಿಸು ಕನ್ನಡ ಡಿಂಡಿಮವ –ಕುವೆಂಪು
19. ಕನ್ನಡವೇ ಸತ್ಯ, ಕನ್ನಡವೇ ನಿತ್ಯ –ಕುವೆಂಪು
20. ಕನ್ನಡಕ್ಕಾಗಿ ಕೈಯೆತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ; ಕನ್ನಡಕ್ಕಾಗಿ ಕೊರಳೆತ್ತು ಅಲ್ಲಿ ಪಾಂಚಜನ್ಯ ಮೂಡುತ್ತದೆ; ಕನ್ನಡಕ್ಕಾಗಿ ಕಿರುಬೆರಳೆತ್ತಿದರೂ ಸಾಕು ಅದು ಗೋವರ್ಧನಗಿರಿಧಾರಿಯಾಗುತ್ತದೆ. –ಕುವೆಂಪು
21. ಕನ್ನಡಿಗರು ವಿನಯಕ್ಕಾಗಿ ಬಗ್ಗಿ ನಡೆಯಬಹುದು, ಆದರೆ ರಿಕ್ತರಂತೆ ಕುಗ್ಗಿ ನಡೆಯಬೇಕಾಗಿಲ್ಲ. –ಕುವೆಂಪು
22. ಕನ್ನಡ ತಾಯಿಗೆ ಮಣಿವ ನಾವ್ ಕನ್ನಡಿಗರೆಂದು ಕುಣಿವ –ರಾಘವ 
23. ನರಕಕ್ ಇಳ್ಸಿ ನಾಲ್ಗೆ ಸೀಳ್ಸಿ ಬಾಯ್ ಒಲಿಸಾಕಿದ್ರೂನೆ ಮೂಗ್ನಲ್ ಕನ್ನಡ್ ಪದವಾಡ್ತೀನಿ -ಜಿ.ಪಿ.ರಾಜರತ್ನಂ
24. ಹಚ್ಚೇವು ಕನ್ನಡದ ದೀಪ –ಡಿ.ಎಸ್.ಕರ್ಕಿ
25. ಹೊತ್ತಿತೋ ಹೊತ್ತಿತು ಕನ್ನಡದ ದೀಪ -ಸಿದ್ಧಯ್ಯ ಪುರಾಣಿಕ
26. ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ -ಚೆನ್ನವೀರ ಕಣವಿ
27. ಕನ್ನಡ ರಾಜ್ಯದಲ್ಲಿ ಕನ್ನಡವೇ ಅಧಿದೇವತೆ, ಉಳಿದ ಭಾಷೆಗಳು ಪರಿವಾರ ಮಾತ್ರ. –ದೇ.ಜವರೇಗೌಡ
28. ಕನ್ನಡ ನನ್ನ ಮೊದಲ ಪ್ರೀತಿ; ಎರಡನೆಯ ಪ್ರೀತಿಯೂ ಅದೇ. -ಹಾ.ಮಾ.ನಾಯಕ
29. ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ –ಚಂಪಾ

Post a Comment

4 Comments

  1. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
    jayakumarcsj@gmail.com

    ReplyDelete
  2. jayakumarcsj@gmail.com

    ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ

    ReplyDelete
  3. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ

    ReplyDelete
  4. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
    jayakumarcsj@gmail.com

    ReplyDelete