ರಜೆ ಸೌಲಭ್ಯ

ವೈವಿಧ್ಯಪೂರ್ಣ ರಜೆ ಸೌಲಭ್ಯ

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ಅನುಬಂಧ ‘ಬಿ’ಯಲ್ಲಿ ಸಾಂರ್ದಭಿಕ ಮತ್ತು ವಿಶೇಷ ಸಾಂರ್ದಭಿಕ ರಜೆಗಳು ಈ ಕೆಳಗಿನಂತೆ ಸರ್ಕಾರಿ ನೌಕರರಿಗೆ ಲಭ್ಯವಾಗುತ್ತದೆ.

1. *ಸಾಂರ್ದಭಿಕ ರಜೆ*

ಕಾಯಂ ಅಥವಾ ಹಂಗಾಮಿ ಸರ್ಕಾರಿ ನೌಕರರಿಗೆ ಜನವರಿ ಮೊದಲ ದಿನಾಂಕದಿಂದ ಡಿಸೆಂಬರ್ 31ನೇ ದಿನಾಂಕದವರೆಗೆ 15 ದಿನಗಳ ಸಾಂರ್ದಭಿಕ ರಜೆ ದೊರೆಯುತ್ತದೆ. ಬಿಡುವಿನ ವೇಳೆ ಇಲಾಖೆಯಲ್ಲಿ ಕೆಲಸ ಮಾಡುವ ನೌಕರರಿಗೂ ಸಾಂರ್ದಭಿಕ ರಜೆ ಲಭ್ಯ. ಒಂದು ಸಲಕ್ಕೆ 7 ದಿನಗಳಿಗಿಂತ ಇದನ್ನು ಮಂಜೂರು ಮಾಡಲಾಗುವುದಿಲ್ಲ.

ಮೊದಲನೇ ವರ್ಷದ ಸೇವಾ ಅವಧಿಯಲ್ಲಿ ಸರ್ಕಾರಿ ನೌಕರರಿಗೆ ಒಂದು ತಿಂಗಳಿನ ಸೇವೆಗಾಗಿ ಒಂದು ದಿನದಂತೆ ಸಾಂರ್ದಭಿಕ ರಜೆ ಕೊಡಬೇಕು. ಅರ್ಧ ದಿನದ ಸಾಂರ್ದಭಿಕ ರಜೆಯನ್ನೂ ಕೊಡಬಹುದು. ಮಧ್ಯಾಹ್ನ 2 ಗಂಟೆವರೆಗೆ ಮತ್ತು ನಂತರದ ಅವಧಿಯನ್ನು, ಅರ್ಧ ದಿನಕ್ಕಾಗಿ ಲೆಕ್ಕ ಹಾಕಬೇಕು.

ಸಾಂರ್ದಭಿಕ ರಜೆಯನ್ನು ಹಕ್ಕೆಂದು ಕೇಳಲು ಬರುವುದಿಲ್ಲ. ಅಧಿಕಾರಿಗಳಿಗೆ ಮಂಜೂರು ಮಾಡಿದ ರಜೆಯನ್ನು ರದ್ದು ಪಡಿಸುವುದಕ್ಕೂ ಹಕ್ಕಿದೆ. ರಜೆಯನ್ನು ಮೊದಲು ಮಂಜೂರು ಮಾಡಿಸಿಕೊಂಡು ನಂತರ ಅದನ್ನು ಬಳಸಬೇಕು. ಆದರೆ ಕಾಯಿಲೆಯಾಗಿ ಅಥವಾ ಇನ್ನಾವುದೇ ಆಕಸ್ಮಿಕಗಳಿಂದಾಗಿ ಕಚೇರಿಗೆ ಬಂದು ರಜೆಯನ್ನು ಮುಂಗಡವಾಗಿ ಮಂಜೂರು ಮಾಡಿಸಲು ಸಾಧ್ಯವಾಗದಿರುವ ಸಂದರ್ಭಗಳಲ್ಲಿ ಅಧಿಕಾರಿಗಳಿಗೆ ಮನವರಿಕೆ ಮಾಡಿಸಿ ಮರುದಿನ ರಜೆ ಮಂಜೂರು ಮಾಡಿಸಿಕೊಳ್ಳಬಹುದು.

ಸಾಂರ್ದಭಿಕ ರಜೆಯನ್ನು ಪರಿವರ್ತಿತ ರಜೆಗಳೊಡನೆ ಸೇರಿಸಬಹುದು. ಆದರೆ ಒಟ್ಟು ಅನುಪಸ್ಥಿತಿ 10 ದಿನಗಳಿಗೆ ಮೀರಕೂಡದು. ಆಕಸ್ಮಿಕ ರಜೆಯನ್ನು ಸೇವಾ ಅವಧಿಯೆಂದೇ ಭಾವಿಸಲಾಗುವುದು.

2. *ವಿಶೇಷ ಸಾಂರ್ದಭಿಕ ರಜೆ*

ವಿಶೇಷ ಸಂದರ್ಭಗಳಲ್ಲಿ ಈ ರಜೆ ಪಡೆಯಬಹುದು

1. ನಾಯಿ ಅಥವಾ ಇನ್ನಾವುದೇ ವಿಷಪೂರಿತ ಪ್ರಾಣಿ/ಹುಳು ಕಡಿದರೆ ಅಂತಹವರಿಗೆ ಚಿಕಿತ್ಸೆಗಾಗಿ – 14ದಿನಗಳ ವಿಶೇಷ ಸಾಂರ್ದಭಿಕರಜೆ ಹಾಗೂ ಹೋಗಿಬರುವ ಪ್ರಯಾಣದ ದಿನಗಳು

2. ಸ್ವಯಂ ಸೇವಕರಾಗಿರುವ ಸರ್ಕಾರಿ ನೌಕರರು ಬಂದೂಕು ತರಬೇತಿಗೆ ಹಾಜರಾದಾಗ – ಅಗತ್ಯವಿರುವಷ್ಟು ಅವಧಿಗೆ ನೀಡಬಹುದು.

3. ಸರ್ಕಾರಿ ನೌಕರರ ಕೇಂದ್ರ ಮತ್ತು ಜಿಲ್ಲಾ ಮಟ್ಟದ ಸಂಘದ ಪದಾಧಿಕಾರಿಗಳಿಗೆ – ಪ್ರತಿ ವರ್ಷಕ್ಕೆ 15 ದಿನಗಳು ಮೀರದಂತೆ

4. ರಾಜ್ಯ ಸರ್ಕಾರಿ ‘ಡಿ’ ವರ್ಗದ ನೌಕರರ ಸಂಘದ ಪದಾಧಿಕಾರಿಗಳಿಗೆ – ಪ್ರತಿ ವರ್ಷಕ್ಕೆ 15 ದಿನಗಳು ಮೀರದಂತೆ

5. ದೆಹಲಿಯ ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸರ್ಕಾರಿ ಉದ್ಯೋಗಿಗಳಿಗೆ ಪ್ರತಿ ವರ್ಷಕ್ಕೆ 6 ದಿನಗಳು ಮೀರದಂತೆ ವಿಶೇಷ ಸಾಂರ್ದಭಿಕ ರಜೆ ಲಭ್ಯ .

6. ಶೈಕ್ಷಣಿಕವಾಗಿ ವಾಣಿಜ್ಯ ಪರೀಕ್ಷಾ ಮಂಡಳಿಯು ನಡೆಸುವ ಪರೀಕ್ಷೆಗಾಗಿ ಪರೀಕ್ಷಾ ಅವಧಿ ಮತ್ತು ವಾಸ್ತವ ಪ್ರಯಾಣದ ಅವಧಿಯ ದಿನಗಳ ಮಟ್ಟಿಗೆ ವಿಶೇಷ ಸಾಂರ್ದಭಿಕ ರಜೆ ಲಭ್ಯ .

7. ಅಖಿಲ ಭಾರತ ಮಾಧ್ಯಮಿಕ ಶಿಕ್ಷಕರ ಫೆಡರೇಷನ್ನಿನ ಪದಾಧಿಕಾರಿಗಳು ವಿವಿಧ ಸಭೆ ವಿಚಾರ ಸಂಕಿರಣ ಗೋಷ್ಠಿಗಳು ನಡೆಯುವ ದಿನಗಳ ಮಟ್ಟಿಗೆ ಈ ವಿಶೇಷ ಸಾಂರ್ದಭಿಕ ರಜೆ ಲಭ್ಯ.

8. ವಿಶ್ವವಿದ್ಯಾಲಯಗಳ ಪರೀಕ್ಷೆಗಳಲ್ಲಿ ಪರೀಕ್ಷಕರಾಗಿ ಆಯ್ಕೆಗೊಂಡ ಸರ್ಕಾರಿ ನೌಕರರಿಗೆ 30 ದಿನಗಳಿಗೆ ಮೀರದಂತೆ ವಿಶೇಷ ಸಾಂರ್ದಭಿಕ ರಜೆ ಲಭ್ಯ.

9. ವೈದ್ಯಕೀಯ ಮತ್ತು ಸಾರ್ವಜನಿಕ ಆರೋಗ್ಯ ಇಲಾಖೆಯವರು ನಡೆಸುವ ಸಮ್ಮೇಳನಗಳಲ್ಲಿ 15 ದಿನ ವಿಶೇಷ ಸಾಂರ್ದಭಿಕ ರಜೆ ಕೊಡಬಹುದು. (ಪ್ರಯಾಣ ಭತ್ಯೆ ರಹಿತ)

10. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಏರ್ಪಾಟಾಗುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸರ್ಕಾರಿ ನೌಕರರಿಗೆ ವರ್ಷಕ್ಕೆ 15 ದಿನ ವಿಶೇಷ ಸಾಂರ್ದಭಿಕ ರಜೆ ಕೊಡಬಹುದು

11. ಯುವ ಜನ ಇಲಾಖೆಯವರು ಏರ್ಪಡಿಸುವ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸರ್ಕಾರಿ ನೌಕರರಿಗೆ ವರ್ಷಕ್ಕೆ 15 ದಿನ ವಿಶೇಷ ಸಾಂರ್ದಭಿಕ ರಜೆ ಕೊಡಬಹುದು.

12. ಸಂತಾನ ಹರಣ ಶಸ್ತ್ರ ಚಿಕಿತ್ಸೆಯ ಸಂದರ್ಭಗಳಲ್ಲಿ 7 ದಿನಗಳಿಗೆ ಮೀರದಂತೆ ವಿಶೇಷ ಸಾಂರ್ದಭಿಕ ರಜೆ ಕೊಡಬಹುದು.

13. ಸಂತಾನ ಹರಣ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಲಿಲ್ಲವೆಂದು ವೈದ್ಯಾಧಿಕಾರಿಗಳು ಪ್ರಮಾಣ ಪತ್ರ ಕೊಟ್ಟರೆ 6 ದಿನಗಳ ವಿಶೇಷ ಸಾಂರ್ದಭಿಕ ರಜೆ ಕೊಡಬಹುದು.

14. ಶೀಘ್ರಲಿಪಿ ಪರೀಕ್ಷೆಗಳ ಮೇಲ್ವಿಚಾರಕರಾಗಿ ಹೋಗುವ ಶೀಘ್ರಲಿಪಿಗಾರರಿಗೆ ಪರೀಕ್ಷೆಯ ಅವಧಿಗಾಗಿ ಮತ್ತು ಪ್ರಯಾಣದ ಅವಧಿಗಾಗಿ ವಿಶೇಷ ಸಾಂರ್ದಭಿಕ ರಜೆ ಲಭ್ಯ.

15. ಬಾಣಂತಿತನವಿಲ್ಲದ ಸಂತಾನ ಹರಣ ಶಸ್ತ್ರ ಚಿಕಿತ್ಸೆಗಾಗಿ ಮಹಿಳಾ ಉದ್ಯೋಗಿಗಳಿಗೆ ಇಲಾಖಾ ಮುಖ್ಯಸ್ಥರು 14 ದಿನಗಳ ವಿಶೇಷ ಸಾಂರ್ದಭಿಕ ರಜೆ ಮಂಜೂರು ಮಾಡಬಹುದು.

16. ಐ.ಯು.ಸಿ.ಡಿ.ಯನ್ನು ಅಳವಡಿಸಿಕೊಳ್ಳುವ ಸಲುವಾಗಿ 1 ದಿನ ರಜೆ ಕೊಡಬಹುದು.

17. ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಕ್ರೀಡೋತ್ಸವಗಳಲ್ಲಿ ಭಾಗವಹಿಸಿದಾಗ 1 ವರ್ಷಕ್ಕೆ 30 ದಿನಗಳ ವಿಶೇಷ ರಜೆ ಲಭ್ಯ.

18. ಅಖಿಲ ಭಾರತ ಫುಟ್ಬಾಲ್, ಹಾಕಿ, ಕ್ರಿಕೆಟ್, ಟೆನ್ನಿಸ್ ಮೊದಲಾದ ಕ್ರೀಡಾ ಸಂಸ್ಥೆಗಳು ಸರ್ಕಾರಿ ನೌಕರರನ್ನು ಕ್ರೀಡೆಗಳಲ್ಲಿ ಭಾಗವಹಿಸಲು ಚುನಾಯಿಸಿದಾಗ ಕೊಡಬಹುದು. ಇದಕ್ಕೂ ಹೆಚ್ಚಿಗೆ ಬೇಕಾದಲ್ಲಿ, ಗಳಿಕೆ ರಜೆ, ಅಥವಾ ಅರ್ಧ ವೇತನ ರಜೆಯನ್ನು ತೆಗೆದುಕೊಳ್ಳಬೇಕು. ಈ ವಿಶೇಷ ಸಾಂರ್ದಭಿಕ ರಜೆಯನ್ನು ಸಾಮಾನ್ಯ ಸಾಂರ್ದಭಿಕ ರಜೆ ಎನ್ನುವರು.

19. ಕ್ರೀಡಾ ಸಂಸ್ಥೆಗಳಲ್ಲಿ ತರಬೇತಿದಾರರೆಂದು ನೇಮಕ ಮಾಡಿದಾಗ ರಜೆಯೊಡನೆ ಸೇರಿಸಕೂಡದು.

20. ರಕ್ತದಾನ ಮಾಡಿದ ಸಂದರ್ಭದಲ್ಲಿ (ಬ್ಲಡ್ ಬ್ಯಾಂಕ್ / ಆಸ್ಪತ್ರೆ / ರೆಡ್ ಕ್ರಾಸ್ ಸಂಸ್ಥೆಗಳಿಂದ ಪೂರಕ ದಾಖಲೆಗಳನ್ನು ಒದಗಿಸಬೇಕು.) ಕೆಸಿಎಸ್​ಆರ್ ನಿಯಮಾವಳಿ ಪ್ಯಾರಾ 11ಜಿ ಅನುಬಂಧ-ಬಿ, ಪ್ರಕಾರ ಒಂದು ದಿನ ವಿಶೇಷ ಸಾಂರ್ದಭಿಕ ರಜೆ ಮಂಜೂರು ಮಾಡಬಹುದು.

3. ನಿರ್ಬಂಧಿತ ರಜೆ (ಛಿಠಠ್ಟಿಜ್ಚಿಠಿಛಿಛ ಜಟ್ಝಜಿಛಚಢ):

ಪ್ರತಿವರ್ಷ ಘೊಷಿತ ದಿನಾಂಕಗಳ ಅಧಿಕೃತ ಹಬ್ಬಗಳ ಆಚರಣೆಯ ಸಂಬಂಧ 2 ದಿನ ನಿರ್ಬಂಂಧಿತ ರಜೆ ಪ್ರತಿಯೊಬ್ಬ ಸರ್ಕಾರಿ ನೌಕರನಿಗೆ ದೊರೆಯುತ್ತದೆ. ಈ ರಜೆಯನ್ನು ಸಾಂರ್ದಭಿಕ ರಜೆ ಅಥವಾ ಇತರ ರಜೆಯ ಮೊದಲು ಅಥವಾ ಅನಂತರ ಸಂಯೋಜಿಸಿ ಮಂಜೂರು ಮಾಡಬಹುದು.

Post a Comment

0 Comments